ಹಾವೇರಿ ಜಿಲ್ಲೆಯ ಮಹಿಳೆಯರಿಗೆ ಮಹತ್ವದ ಸುದ್ದಿ! ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ ವಿವಿಧ ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಡಿಯಲ್ಲಿ (WCD Haveri Anganwadi Recruitment 2025) ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಒಟ್ಟು 238 ಹುದ್ದೆಗಳು ಖಾಲಿಯಾಗಿದ್ದು, ಇದರಲ್ಲು 61 ಅಂಗನವಾಡಿ ಕಾರ್ಯಕರ್ತೆ ಮತ್ತು 177 ಸಹಾಯಕಿಯರ ಹುದ್ದೆಗಳಿವೆ. ಆಸಕ್ತ ಮತ್ತು ಅರ್ಹ ಸ್ಥಳೀಯ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರು ನವೆಂಬರ್ 17, 2025ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
🏫 ಖಾಲಿ ಹುದ್ದೆಗಳ ವಿವರ
ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಹುದ್ದೆಗಳು ಹೀಗಿವೆ:
-
ಬ್ಯಾಡಗಿ: 03 ಕಾರ್ಯಕರ್ತೆ, 17 ಸಹಾಯಕಿ – ಒಟ್ಟು 20
-
ಹಾನಗಲ್: 13 ಕಾರ್ಯಕರ್ತೆ, 21 ಸಹಾಯಕಿ – ಒಟ್ಟು 34
-
ಹಾವೇರಿ: 05 ಕಾರ್ಯಕರ್ತೆ, 29 ಸಹಾಯಕಿ – ಒಟ್ಟು 34
-
ಹಿರೇಕೆರೂರು: 12 ಕಾರ್ಯಕರ್ತೆ, 27 ಸಹಾಯಕಿ – ಒಟ್ಟು 39
-
ರಾಣೇಬೆನ್ನೂರು: 20 ಕಾರ್ಯಕರ್ತೆ, 34 ಸಹಾಯಕಿ – ಒಟ್ಟು 54
-
ಸವಣೂರು: 04 ಕಾರ್ಯಕರ್ತೆ, 23 ಸಹಾಯಕಿ – ಒಟ್ಟು 27
-
ಶಿಗ್ಗಾಂವ್: 04 ಕಾರ್ಯಕರ್ತೆ, 26 ಸಹಾಯಕಿ – ಒಟ್ಟು 30
🎓 ಶೈಕ್ಷಣಿಕ ಅರ್ಹತೆ
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಪಿ.ಯು.ಸಿ ಪಾಸಾಗಿರಬೇಕು, ಸಹಾಯಕಿ ಹುದ್ದೆಗೆ ಎಸ್.ಎಸ್.ಎಲ್.ಸಿ ಪಾಸು ಅಗತ್ಯ. ಕನ್ನಡ ಭಾಷೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.
⏱️ ವಯೋಮಿತಿ ಮತ್ತು ವೇತನ
ಕನಿಷ್ಠ ವಯಸ್ಸು 19 ವರ್ಷ ಹಾಗೂ ಗರಿಷ್ಠ 35 ವರ್ಷ. ವಿಕಲಚೇತನ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ. ಆಯ್ಕೆಯಾದವರಿಗೆ ಸರ್ಕಾರಿ ನಿಯಮಾನುಸಾರ ವೇತನ ನೀಡಲಾಗುತ್ತದೆ.
💻 ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ https://karnemakaone.kar.nic.in/abcd/ಗೆ ಭೇಟಿ ನೀಡಿ “ಅಂಗನವಾಡಿ ಕಾರ್ಯಕರ್ತೆ/ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಿ” ಲಿಂಕ್ನಲ್ಲಿ ಮಾಹಿತಿ ತುಂಬಿ, ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸಂಬಂಧಿಸಿದ ತಾಲೂಕು ಶಿಶು ಅಭಿವೃದ್ಧಿ ಯೋಜನಾ ಕಚೇರಿಯನ್ನು ಸಂಪರ್ಕಿಸಬಹುದು.













