ಭಾರತದ ಪ್ರಮುಖ ವಾಚ್ ತಯಾರಿಕಾ ಸಂಸ್ಥೆಯಾದ ಟೈಟಾನ್ (Titan) ಇದೀಗ ಕೈಗಡಿಯಾರ ತಯಾರಿಕೆಯಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಕರ್ನಾಟಕದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ, ಸಂಸ್ಥೆ ತನ್ನ ಸ್ಟೆಲ್ಲರ್ 3.0 (Stellar 3.0) ಸರಣಿಯ ಅಡಿಯಲ್ಲಿ ದೇಶದ ಮೊದಲ ವಾಂಡರಿಂಗ್ ಅವರ್ಸ್ ವಾಚ್ (Wandering Hours Watch) ಅನ್ನು ಅನಾವರಣಗೊಳಿಸಿದೆ.
ಈ ಹೊಸ ಸರಣಿಯು ಬಾಹ್ಯಾಕಾಶದಿಂದ ಸ್ಫೂರ್ತಿ ಪಡೆದ ವಿನ್ಯಾಸ, ಸುಧಾರಿತ ತಂತ್ರಜ್ಞಾನ ಮತ್ತು ಅಪರೂಪದ ವಸ್ತುಗಳ ಸಂಯೋಜನೆಯಾಗಿದೆ. ಸ್ಟೆಲ್ಲರ್ 3.0 ಸರಣಿಯಲ್ಲಿ ಒಟ್ಟು 9 ವಿಭಿನ್ನ ವಿನ್ಯಾಸದ ವಾಚ್‌ಗಳು ಇದ್ದು, ಅದರಲ್ಲಿ 3 ಸೀಮಿತ ಆವೃತ್ತಿಗಳು (limited editions) ವಿಶೇಷ ಗಮನ ಸೆಳೆಯುತ್ತಿವೆ.
ಈ ಸರಣಿಯ ಮುಖ್ಯ ಆಕರ್ಷಣೆ ಎಂದರೆ ವಾಂಡರಿಂಗ್ ಅವರ್ಸ್ ವಾಚ್, ಇದು ಗ್ರಹಗಳು ತಮ್ಮ ಕಕ್ಷೆಯಲ್ಲಿ ತಿರುಗುವಂತೆ ವಿನ್ಯಾಸಗೊಂಡ ವಿಶಿಷ್ಟ ಚಲಿಸುವ ಮುಳ್ಳುಗಳನ್ನು ಹೊಂದಿದೆ. ಈ ವಾಚ್‌ನ್ನು ಟೈಟಾನ್‌ನ ಸ್ವಂತ ತಯಾರಿಕಾ ಘಟಕದಲ್ಲಿ ನಿರ್ಮಿಸಲಾಗಿದೆ. ಕ್ರಿಸ್ಟಲೈಸ್ಡ್ ಟೈಟಾನಿಯಂ (Crystallized Titanium) ಹಾಗೂ ಬ್ರಷ್ಡ್ ಕಾಪರ್ (Brushed Copper) ಬಳಸಿ ತಯಾರಿಸಲಾದ ಈ ವಾಚ್‌ನ ಬೆಲೆ ₹1,79,995 ಆಗಿದ್ದು, ಕೇವಲ 500 ಯೂನಿಟ್‌ಗಳು ಮಾತ್ರ ಲಭ್ಯವಿವೆ.
ಅದೇ ಸರಣಿಯ ಮತ್ತೊಂದು ಮಾದರಿ ಐಸ್ ಮೀಟಿಯೋರೈಟ್ (Ice Meteorite), ಸುಮಾರು 1,20,000 ವರ್ಷ ಹಳೆಯ ಉಲ್ಕಾಶಿಲೆಯ ತುಂಡುಗಳಿಂದ ನಿರ್ಮಿಸಲಾದ ಡಯಲ್ ಹೊಂದಿದೆ ಮತ್ತು ಇದರ ಬೆಲೆ ₹1,39,995. ಇನ್ನೊಂದು ಆಕರ್ಷಕ ಮಾದರಿ ಔರೋರಾ ಕೇಲಮ್ (Aurora Caelum) ಹಸಿರು ಬಣ್ಣದ ಡಯಲ್‌ನೊಂದಿಗೆ ₹95,995 ಕ್ಕೆ ಲಭ್ಯ.
ಟೈಟಾನ್ ವಾಚಸ್ ಮತ್ತು ವೇರೆಬಲ್ಸ್ ವಿಭಾಗದ ಸಿಇಒ ಕುರುವಿಲ್ಲಾ ಮಾರ್ಕೋಸ್ ಅವರು ತಿಳಿಸಿದ್ದಾರೆ – “ಸ್ಟೆಲ್ಲರ್ 3.0 ಸರಣಿ (Titan Stellar 3.0 series) ನಮ್ಮ ತಾಂತ್ರಿಕ ನೈಪುಣ್ಯ ಮತ್ತು ಕಲಾತ್ಮಕತೆಯ ಸಂಕೇತವಾಗಿದೆ. ಇದು ಭಾರತೀಯ ವಾಚ್ ತಯಾರಿಕೆಯನ್ನು ಜಾಗತಿಕ ಮಟ್ಟಕ್ಕೆ ತರುತ್ತದೆ,” ಎಂದು ಹೇಳಿದ್ದಾರೆ.
ಈ ಸ್ಟೆಲ್ಲರ್ ಸರಣಿ ಈಗ ಆಯ್ದ ಟೈಟಾನ್ ಮಳಿಗೆಗಳು (Titan Stores in Karnataka) ಹಾಗೂ ಅಧಿಕೃತ ವೆಬ್‌ಸೈಟ್ www.titan.co.in ನಲ್ಲಿ ಖರೀದಿಗೆ ಲಭ್ಯವಿದೆ.











