ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (Post Office Monthly Income Scheme)
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (POMIS) ಕೇಂದ್ರ ಸರ್ಕಾರದಿಂದ ನೀಡಲಾಗಿರುವ ಒಂದು ಸ್ಥಿರ ಮತ್ತು ಅಪಾಯರಹಿತ ಉಳಿತಾಯ ಯೋಜನೆ ಆಗಿದ್ದು, ಪ್ರತಿಮಾಸವೂ ಖಾತರಿಯ ಆದಾಯವನ್ನು ನೀಡುತ್ತದೆ. ಈ ಯೋಜನೆ (Karnataka Post Office Scheme) ಮೂಲಕ ಹೂಡಿಕೆದಾರರು ಒಂದು ಬಾರಿಗೆ ನಿರ್ದಿಷ್ಟ ಮೊತ್ತವನ್ನು ಠೇವಣಿ ಮಾಡಿ ಪ್ರತಿ ತಿಂಗಳು ಬಡ್ಡಿಯಾಗಿ ಹಣವನ್ನು ಪಡೆಯಬಹುದು. ಸರ್ಕಾರದ ಭದ್ರತೆಯುಳ್ಳ ಈ ಯೋಜನೆ (Safe Investment) ಹೂಡಿಕೆದಾರರಿಗೆ ಸಂಪೂರ್ಣ ಸುರಕ್ಷಿತವಾಗಿರುತ್ತದೆ.
ಬಡ್ಡಿದರ ಮತ್ತು ಹೂಡಿಕೆ ಮಿತಿ
ಪ್ರಸ್ತುತ (Post Office Monthly Income Scheme Interest Rate) ವಾರ್ಷಿಕ 7.4% ಬಡ್ಡಿದರವನ್ನು ನೀಡಲಾಗುತ್ತಿದೆ. ಈ ಬಡ್ಡಿ ಪ್ರತಿ ತಿಂಗಳು ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ. ವೈಯಕ್ತಿಕ ಖಾತೆಯಲ್ಲಿ ಕನಿಷ್ಠ ₹1,000ರಿಂದ ₹9 ಲಕ್ಷವರೆಗೆ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ (Joint Account Benefit) ಗರಿಷ್ಠ ₹15 ಲಕ್ಷವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ವಿವಾಹಿತ ದಂಪತಿಗಳಿಗೆ ಇದು ಅತ್ಯುತ್ತಮ ಆಯ್ಕೆ.
ಉದಾಹರಣೆಗೆ, ₹15 ಲಕ್ಷ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಸುಮಾರು ₹9,250 ಆದಾಯ ಸಿಗುತ್ತದೆ. ವೈಯಕ್ತಿಕವಾಗಿ ₹9 ಲಕ್ಷ ಹೂಡಿಸಿದರೆ ₹5,550 ಪ್ರತಿ ತಿಂಗಳ ಆದಾಯ ದೊರೆಯುತ್ತದೆ. ಮೂರು ಜನರು ಸೇರಿ ಒಂದು ಜಂಟಿ ಖಾತೆ ತೆರೆಯುವ ಅವಕಾಶವೂ ಇದೆ.
ಯೋಜನೆ ಅವಧಿ ಮತ್ತು ವಿಸ್ತರಣೆ
ಈ ಯೋಜನೆಯ (Post Office 5 Year Scheme) ಅವಧಿ 5 ವರ್ಷಗಳಾಗಿದ್ದು, ಅವಧಿ ಮುಗಿದ ನಂತರ ಹೂಡಿಕೆಯ ಮೊತ್ತವನ್ನು ಹಿಂಪಡೆಯಬಹುದು ಅಥವಾ ಅದೇ ಸಮಯದ ಬಡ್ಡಿದರದಲ್ಲಿ ಮತ್ತೊಮ್ಮೆ 5 ವರ್ಷಗಳವರೆಗೆ ವಿಸ್ತರಿಸಬಹುದು. ಪೋಷಕರು 10 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿಯೂ ಖಾತೆ ತೆರೆಯಬಹುದು, ಇದು ಮಕ್ಕಳ ಶಿಕ್ಷಣ ಮತ್ತು ಖರ್ಚುಗಳಿಗೆ ಸಹಕಾರಿಯಾಗುತ್ತದೆ.
ಅವಧಿಪೂರ್ವ ಹಿಂಪಡೆಯುವಿಕೆ ಮತ್ತು ತೆರಿಗೆ ನಿಯಮಗಳು
ತುರ್ತು ಸಂದರ್ಭಗಳಲ್ಲಿ ಖಾತೆ ಮುಂಚಿತವಾಗಿ ಮುಚ್ಚುವ ಅವಕಾಶವಿದೆ. ಒಂದು ವರ್ಷದೊಳಗೆ ಹಣ ಹಿಂಪಡೆಯಲು ಅವಕಾಶವಿಲ್ಲ. 1–3 ವರ್ಷಗಳ ನಡುವೆ ಮುಚ್ಚಿದರೆ 2% ಕಡಿತ ಮತ್ತು 3 ವರ್ಷಗಳ ನಂತರ ಮುಚ್ಚಿದರೆ ಕೇವಲ 1% ಕಡಿತ ಅನ್ವಯಿಸುತ್ತದೆ. (Post Office Tax Rules) ಪ್ರಕಾರ ಮಾಸಿಕ ಬಡ್ಡಿ ಆದಾಯ ತೆರಿಗೆಗೆ ಒಳಪಟ್ಟರೂ, ಟಿಡಿಎಸ್ ವಿಧಿಸಲಾಗುವುದಿಲ್ಲ. ಖಾತೆಯನ್ನು ಯಾವುದೇ ಅಂಚೆ ಕಚೇರಿಗೆ ವರ್ಗಾಯಿಸಲು ಸಹ ಅವಕಾಶವಿದೆ. (Senior Citizen Investment) ಯೋಜನೆ ಹಿರಿಯ ನಾಗರಿಕರಿಗೆ ವಿಶೇಷವಾಗಿ ಪ್ರಯೋಜನಕಾರಿ.








