NHAI ನೇಮಕಾತಿ 2025: ಸ್ಟೆನೋಗ್ರಾಫರ್, ಲೆಕ್ಕಪರಿಶೋಧಕ ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಸರ್ಕಾರಿ ಉದ್ಯೋಗಾವಕಾಶ!

Published On: November 2, 2025
Follow Us

ಭಾರತ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ **ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)**ವು ನೇರ ನೇಮಕಾತಿ ಮೂಲಕ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ (NHAI Recruitment 2025 Notification) ಪ್ರಕಟಿಸಿದೆ. ಒಟ್ಟು 84 ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.

ಹುದ್ದೆಗಳ ವಿವರ

ಉಪ ವ್ಯವಸ್ಥಾಪಕ, ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ, ಕಿರಿಯ ಭಾಷಾಂತರ ಅಧಿಕಾರಿ, ಲೆಕ್ಕಪರಿಶೋಧಕ ಹಾಗೂ ಸ್ಟೆನೋಗ್ರಾಫರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

  • ಉಪ ವ್ಯವಸ್ಥಾಪಕ (09) – ಹಣಕಾಸು ವಿಷಯದಲ್ಲಿ MBA ಪೂರ್ಣಗೊಳಿಸಿದವರು ಅರ್ಹರು.

  • ಗ್ರಂಥಾಲಯ ಮತ್ತು ಮಾಹಿತಿ ಸಹಾಯಕ (01) – ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಅಗತ್ಯ.

  • ಕಿರಿಯ ಭಾಷಾಂತರ ಅಧಿಕಾರಿ (01) – ಹಿಂದಿಯಲ್ಲಿ ಸ್ನಾತಕೋತ್ತರ ಪದವಿ, ಇಂಗ್ಲಿಷ್ ಕಡ್ಡಾಯ ವಿಷಯ.

  • ಲೆಕ್ಕಪರಿಶೋಧಕ (42) – ಪದವಿ ಜೊತೆಗೆ (CA/CMA Intermediate) ಪಾಸಾದಿರಬೇಕು.

  • ಸ್ಟೆನೋಗ್ರಾಫರ್ (31) – ಯಾವುದೇ ವಿಷಯದಲ್ಲಿ ಪದವಿ ಮತ್ತು ನಿಗದಿತ ಟೈಪಿಂಗ್ ವೇಗ ಅಗತ್ಯ.

ಅರ್ಜಿ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ – ಅಕ್ಟೋಬರ್ 30, 2025
ಕೊನೆಯ ದಿನಾಂಕ – ಡಿಸೆಂಬರ್ 15, 2025
ಆನ್‌ಲೈನ್ ಶುಲ್ಕ ಪಾವತಿ ಕೊನೆಯ ದಿನ – ಡಿಸೆಂಬರ್ 15, 2025

ವಯೋಮಿತಿ ಮತ್ತು ಸಡಿಲಿಕೆ

ಸ್ಟೆನೋಗ್ರಾಫರ್ ಹುದ್ದೆಗೆ ಗರಿಷ್ಠ 28 ವರ್ಷ, ಉಳಿದ ಹುದ್ದೆಗಳಿಗೆ 30 ವರ್ಷ. ಪ.ಜಾತಿ/ಪ.ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10–15 ವರ್ಷ ವಯೋಮಿತಿ ಸಡಿಲಿಕೆ.

ಆಯ್ಕೆ ವಿಧಾನ

(CBT Exam), (Interview), (Skill Test), ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಮುಖಾಂತರ ಆಯ್ಕೆ ನಡೆಯಲಿದೆ.

ವೇತನ ಶ್ರೇಣಿ

ಉಪ ವ್ಯವಸ್ಥಾಪಕ – ₹56,100–₹1,77,500
ಗ್ರಂಥಾಲಯ ಮತ್ತು ಭಾಷಾಂತರ ಅಧಿಕಾರಿ – ₹35,400–₹1,12,400
ಲೆಕ್ಕಪರಿಶೋಧಕ – ₹29,200–₹92,300
ಸ್ಟೆನೋಗ್ರಾಫರ್ – ₹25,500–₹81,100

ಅರ್ಜಿ ಶುಲ್ಕ

ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳಿಗೆ ₹500, ಪ.ಜಾತಿ/ಪ.ಪಂಗಡ/PwBD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ.

ಅರ್ಜಿ ಪ್ರಕ್ರಿಯೆ

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://cdn.digialm.com/EForms/configuredHtml/1258/95810/Index.html ನಲ್ಲಿ ಅರ್ಜಿ ಸಲ್ಲಿಸಬಹುದು. ನೋಂದಣಿ ನಂತರ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ, ಶುಲ್ಕ ಪಾವತಿ ಮಾಡಿ, ಕೊನೆಯಲ್ಲಿ ಅರ್ಜಿಯನ್ನು ಪರಿಶೀಲಿಸಿ ಸಲ್ಲಿಸಬೇಕು. ಯಶಸ್ವಿ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿ ಸಂಗ್ರಹಿಸಿಕೊಳ್ಳಿ.

ಹೆಚ್ಚಿನ ಮಾಹಿತಿಗಾಗಿ NHAI ಸಹಾಯವಾಣಿ 9513252099 ಸಂಪರ್ಕಿಸಬಹುದು.

Join WhatsApp

Join Now

Join Telegram

Join Now

Related Posts

Anganwadi Recruitment 2025: ಹಾವೇರಿ ಜಿಲ್ಲೆಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ!

November 8, 2025

AFCAT 2025 Notification: ವಾಯುಪಡೆಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ರಾಷ್ಟ್ರಸೇವೆಗೆ ಸುವರ್ಣಾವಕಾಶ!

November 8, 2025

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಇನ್ಸ್ಪೆಕ್ಟರ್ (ಲೆಕ್ಕಾಧಿಕಾರಿ) ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ ಪ್ರಕಟ!

November 5, 2025

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ Group C ಮತ್ತು Group D ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ ಪ್ರಕಟ!

November 5, 2025

ರಾಜ್ಯದಲ್ಲಿ ಬರೋಬ್ಬರಿ 18000′ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : CM ಸಿದ್ದರಾಮಯ್ಯ

November 4, 2025

BMRCL ನೇಮಕಾತಿ 2025: “ನಮ್ಮ ಮೆಟ್ರೋ”ಯಲ್ಲಿ ಸೂಪರ್ವೈಸರ್ ಹುದ್ದೆಗಳ ಭರ್ತಿ – ಅರ್ಜಿ ಪ್ರಕ್ರಿಯೆ ಪ್ರಾರಂಭ!

November 2, 2025

Leave a Comment