ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2025ರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಅಗತ್ಯವಾದ (KSET 2025) ಅರ್ಹತಾ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ನವೆಂಬರ್ 4 ರಂದು ಅಧಿಕೃತವಾಗಿ ಪ್ರಕಟಿಸಿದೆ. ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 34 ವಿಷಯಗಳಿಗೆ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿದ್ದು, ಇದೀಗ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಹೋಲಿಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದಿದ್ದಾರೆ.
ಅಭ್ಯರ್ಥಿಗಳು ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ “04-11-KSET-2025 ತಾತ್ಕಾಲಿಕ ಕೀ ಉತ್ತರಗಳು” ಎಂಬ ಲಿಂಕ್‌ನ ಮೂಲಕ ಪಿಡಿಎಫ್ ರೂಪದಲ್ಲಿ ವಿಷಯವಾರು ಕೀ ಉತ್ತರಗಳನ್ನು ವೀಕ್ಷಿಸಬಹುದು. ಪ್ರಕಟಿತ ಉತ್ತರಗಳಲ್ಲಿ ಯಾವುದೇ ತೊಂದರೆ ಅಥವಾ ತಪ್ಪು ಕಂಡುಬಂದರೆ, ಅಭ್ಯರ್ಥಿಗಳು ನವೆಂಬರ್ 6ರೊಳಗೆ ಆನ್‌ಲೈನ್ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.
ಆಕ್ಷೇಪಣೆ ಸಲ್ಲಿಸುವಾಗ (KSET 2025 Key Answer Objection) ಅಭ್ಯರ್ಥಿಗಳು 50 ರೂ. ಶುಲ್ಕ ಪಾವತಿಸಿ, ಪತ್ರಿಕೆಯ ಹೆಸರು, ವಿಷಯ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಮತ್ತು ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಅಪೂರ್ಣ ಅಥವಾ ಆಧಾರರಹಿತ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ. ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 6ರ ಸಂಜೆ 3 ಗಂಟೆ ಎಂದು ನಿಗದಿಯಾಗಿದೆ. ನಂತರ ವಿಷಯ ತಜ್ಞರ ಸಮಿತಿಯು ಪರಿಷ್ಕೃತ ಕೀ ಉತ್ತರಗಳನ್ನು ಪರಿಶೀಲಿಸಿ ಅಂತಿಮವಾಗಿ ಬಿಡುಗಡೆ ಮಾಡಲಿದೆ.
ವಿದ್ಯಾರ್ಥಿಗಳು ತಮ್ಮ ಉತ್ತರಗಳನ್ನು ಹೋಲಿಕೆ ಮಾಡಿ ಅಂಕಗಳ ಅಂದಾಜು ಮಾಡಿಕೊಳ್ಳಬಹುದು. ಇದು ಫಲಿತಾಂಶದ ಮೊದಲು ತಮ್ಮ ಸಾಧನೆಯ ಕುರಿತು ಒಳ್ಳೆಯ ನಿರ್ಧಾರಕ್ಕೆ ಸಹಾಯಕವಾಗಲಿದೆ.
👉 ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ







