ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET 2025): ಅರ್ಜಿ ಪ್ರಕ್ರಿಯೆ ಅಕ್ಟೋಬರ್ 23ರಿಂದ ಪ್ರಾರಂಭ
ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ 2025ನೇ ಸಾಲಿನ (KARTET 2025) ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದೆ. ಈ ಪರೀಕ್ಷೆ 1 ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿಗೆ ಅಗತ್ಯವಾದ (teacher eligibility test) ಆಗಿದ್ದು, ರಾಷ್ಟ್ರಿಯ ಶಿಕ್ಷಕರ ಶಿಕ್ಷಣ ಪರಿಷತ್ (NCTE) ಮಾರ್ಗಸೂಚಿಗಳ ಪ್ರಕಾರ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು.
ಅರ್ಜಿ ಸಲ್ಲಿಕೆ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 23, 2025ರಿಂದ ಪ್ರಾರಂಭವಾಗಿ ನವೆಂಬರ್ 9, 2025ರವರೆಗೆ ನಡೆಯಲಿದೆ. KARTET 2025 ಪರೀಕ್ಷೆ ಡಿಸೆಂಬರ್ 7 (ಭಾನುವಾರ)ರಂದು ನಡೆಯಲಿದೆ. ಅಭ್ಯರ್ಥಿಗಳು ತಮ್ಮ ನೋಂದಣಿಯನ್ನು ಅಧಿಕೃತ ವೆಬ್‌ಸೈಟ್ https://schooleducation.karnataka.gov.in ಮೂಲಕ ಪೂರ್ಣಗೊಳಿಸಬಹುದು.
ಶೈಕ್ಷಣಿಕ ಅರ್ಹತೆ
ಪತ್ರಿಕೆ 1 (Classes 1–5): ಪಿಯುಸಿ ಅಥವಾ ಪದವಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜೊತೆಗೆ (D.El.Ed), (B.El.Ed), ಅಥವಾ (B.Ed) ಕೋರ್ಸ್ ಪೂರ್ಣಗೊಳಿಸಿರುವ ಅಥವಾ ಓದುತ್ತಿರುವವರು ಅರ್ಹರಾಗಿದ್ದಾರೆ.
ಪತ್ರಿಕೆ 2 (Classes 6–8): ಪಿಯುಸಿ ಅಥವಾ ಪದವಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, (B.Ed) ಅಥವಾ (D.El.Ed) ಕೋರ್ಸ್ ತೇರ್ಗಡೆಯಾಗಿರುವ ಅಥವಾ ಓದುತ್ತಿರುವವರು ಅರ್ಜಿ ಹಾಕಬಹುದು.
ಪರೀಕ್ಷೆಯ ವೇಳಾಪಟ್ಟಿ
-
ಪತ್ರಿಕೆ 1: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆ
-
ಪತ್ರಿಕೆ 2: ಮಧ್ಯಾಹ್ನ 2 ರಿಂದ ಸಂಜೆ 4:30 ಗಂಟೆ
ವಿಕಲಚೇತನ ಅಭ್ಯರ್ಥಿಗಳಿಗೆ 50 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ.
ಪರೀಕ್ಷಾ ಶುಲ್ಕ
-
ಸಾಮಾನ್ಯ ವರ್ಗ ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ: ಒಂದೇ ಪತ್ರಿಕೆಗೆ ₹700, ಎರಡೂ ಪತ್ರಿಕೆಗಳಿಗೆ ₹1000.
-
ಪ.ಜಾತಿ/ಪ.ವರ್ಗ/ಪ್ರವರ್ಗ-1 ಅಭ್ಯರ್ಥಿಗಳಿಗೆ: ಒಂದೇ ಪತ್ರಿಕೆಗೆ ₹350, ಎರಡೂ ಪತ್ರಿಕೆಗಳಿಗೆ ₹500.
-
ದಿವ್ಯಾಂಗ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ಸಂಪೂರ್ಣ ವಿನಾಯಿತಿ.
ಅರ್ಜಿ ಸಲ್ಲಿಕೆ ವಿಧಾನ
-
ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
-
“Karnataka Teacher Eligibility Test (KARTET-2025)” ವಿಭಾಗದ “Online Registration Link” ಕ್ಲಿಕ್ ಮಾಡಿ.
-
ಹೊಸ ಪುಟದಲ್ಲಿ ನೋಂದಣಿ ಅಥವಾ ಲಾಗಿನ್ ಮಾಡಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
-
ಅರ್ಜಿ ಶುಲ್ಕ ಪಾವತಿಸಿ ಸಲ್ಲಿಸಿ.
KARTET 2025 Notification PDF, Detailed Syllabus, ಹಾಗೂ Online Application Link ಎಲ್ಲವೂ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.












