ಕರ್ನಾಟಕದ (Satish Dhawan Space Centre) ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ, ಇಸ್ರೋ (ISRO) ವತಿಯಿಂದ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ (technician), (scientist) ಹಾಗೂ (engineer) ಹುದ್ದೆಗಳ ನೇಮಕಾತಿಗಾಗಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಒಟ್ಟು 141 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 16 ರಿಂದ ನವೆಂಬರ್ 14, 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರಗಳು
ಈ ನೇಮಕಾತಿಯಲ್ಲಿ ಹಲವು ವಿಭಾಗಗಳ ಹುದ್ದೆಗಳು ಲಭ್ಯವಿವೆ:
-
ವಿಜ್ಞಾನಿ/ಇಂಜಿನಿಯರ್–ಎಸ್‌ಸಿ: 23 ಹುದ್ದೆಗಳು
-
ತಾಂತ್ರಿಕ ಸಹಾಯಕ: 28 ಹುದ್ದೆಗಳು
-
ವೈಜ್ಞಾನಿಕ ಸಹಾಯಕ: 3 ಹುದ್ದೆಗಳು
-
ಗ್ರಂಥಾಲಯ ಸಹಾಯಕ: 1 ಹುದ್ದೆ
-
ರೇಡಿಯೋಗ್ರಾಫರ್: 1 ಹುದ್ದೆ
-
ಟೆಕ್ನಿಷಿಯನ್–ಬಿ: 70 ಹುದ್ದೆಗಳು
-
ಡ್ರಾಫ್ಟ್‌ಸ್ಮನ್–ಬಿ: 2 ಹುದ್ದೆಗಳು
-
ಅಡುಗೆಯವರು: 3 ಹುದ್ದೆಗಳು
-
ಅಗ್ನಿಶಾಮಕ ಸಿಬ್ಬಂದಿ (Fireman-A): 6 ಹುದ್ದೆಗಳು
-
ಚಾಲಕರು (Light Vehicle Driver-A): 3 ಹುದ್ದೆಗಳು
-
ನರ್ಸ್–ಬಿ: 1 ಹುದ್ದೆ
ಅರ್ಹತೆ ಮತ್ತು ವಯೋಮಿತಿ
ಪ್ರತಿ ಹುದ್ದೆಗೆ ಅಭ್ಯರ್ಥಿಗಳು ಸಂಬಂಧಿತ ಶಿಕ್ಷಣ ಅರ್ಹತೆಗಳನ್ನು ಹೊಂದಿರಬೇಕು — 10ನೇ ತರಗತಿ, ಐಟಿಐ, ಡಿಪ್ಲೊಮಾ (Diploma), ಬಿ.ಎಸ್ಸಿ, ಪದವಿ ಅಥವಾ ಎಂಇ/ಎಂ.ಟೆಕ್ (Engineering Degree) ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು. ವಿಜ್ಞಾನಿ ಮತ್ತು ಇಂಜಿನಿಯರ್ ಹುದ್ದೆಗಳಿಗೆ ವಯೋಮಿತಿ 18 ರಿಂದ 30 ವರ್ಷ, ಇತರ ಹುದ್ದೆಗಳಿಗೆ 18 ರಿಂದ 35 ವರ್ಷ ನಿಗದಿಯಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ದಿವ್ಯಾಂಗರಿಗೆ 10 ವರ್ಷಗಳ ವಯೋ ವಿನಾಯಿತಿ ಅನ್ವಯವಾಗುತ್ತದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಸಾಮಾನ್ಯ ಅಭ್ಯರ್ಥಿಗಳು 500 ರಿಂದ 750 ರೂ.ಗಳವರೆಗೆ (application fee) ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಬಿಡಿ ಹಾಗೂ ಇಎಸ್‌ಎಂ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅಂತಿಮ ಆಯ್ಕೆಯನ್ನು (written test), (skill test) ಮತ್ತು (interview) ಆಧರಿಸಿ ಮಾಡಲಾಗುತ್ತದೆ.
ವೇತನದ ವಿವರ
-
ವಿಜ್ಞಾನಿ/ಇಂಜಿನಿಯರ್: ₹56,100 – ₹1,77,500
-
ತಾಂತ್ರಿಕ ಮತ್ತು ವೈಜ್ಞಾನಿಕ ಸಹಾಯಕರು: ₹44,900 – ₹1,42,400
-
ರೇಡಿಯೋಗ್ರಾಫರ್: ₹25,500 – ₹81,100
-
ಟೆಕ್ನಿಷಿಯನ್ ಮತ್ತು ಡ್ರಾಫ್ಟ್‌ಸ್ಮನ್: ₹21,700 – ₹69,100
-
ನರ್ಸ್–ಬಿ: ₹44,900 – ₹1,42,400
-
ಅಡುಗೆಯವರು, ಚಾಲಕರು ಮತ್ತು ಅಗ್ನಿಶಾಮಕರು: ₹19,900 – ₹63,200
ಈ ಹುದ್ದೆಗಳು ರಾಜ್ಯದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುವ ಅಪರೂಪದ ಅವಕಾಶವಾಗಿದ್ದು, ಇಸ್ರೋ (ISRO recruitment 2025) ನಲ್ಲಿ ಉದ್ಯೋಗ ಕನಸು ಸಾಕಾರಗೊಳಿಸಲು ಇದು ಅತ್ಯುತ್ತಮ ಅವಕಾಶವಾಗಿದೆ.












