ಕರ್ನಾಟಕ ಸರ್ಕಾರ ರೈತರ ಕೃಷಿ ಚಟುವಟಿಕೆಗಳಿಗೆ ಅಡ್ಡಿಯಾಗುತ್ತಿರುವ ದಾರಿ ಸಮಸ್ಯೆ ಪರಿಹರಿಸಲು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ರಾಜ್ಯದ ಅನೇಕ ಭಾಗಗಳಲ್ಲಿ ರೈತರು ತಮ್ಮ ಕೃಷಿ ಭೂಮಿಗಳಿಂದ ಫಸಲು ಹೊರತರಲು ಅಥವಾ ಯಂತ್ರೋಪಕರಣ ಸಾಗಿಸಲು ನೆರೆಹೊರೆಯ ಖಾಸಗಿ ಜಮೀನುಗಳ ಮೂಲಕ ಹೋಗಬೇಕಾಗುತ್ತದೆ. ಆದರೆ ಕೆಲ ಭೂಮಾಲೀಕರು (farm land road issue) ಈ ದಾರಿಗಳನ್ನು ಮುಚ್ಚುವುದರಿಂದ ಅಥವಾ ಅಡ್ಡಿಪಡಿಸುವುದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸರ್ಕಾರದ ವರದಿ ಪ್ರಕಾರ, ಈ ದಾರಿ ವಿವಾದಗಳು ಹಲವು ವರ್ಷಗಳಿಂದ ಮುಂದುವರಿದಿದ್ದು, ಗ್ರಾಮ ನಕ್ಷೆಯಲ್ಲಿ ಗುರುತಿಸಲ್ಪಟ್ಟ ದಾರಿಗಳಲ್ಲಿಯೂ ರೈತರಿಗೆ ತೊಂದರೆ ಉಂಟಾಗಿದೆ. ಇಂತಹ ಸಂದರ್ಭಗಳಲ್ಲಿ ತಹಶೀಲ್ದಾರರು Criminal Procedure Code 1973 ರ ಸೆಕ್ಷನ್ 147 ಅಡಿಯಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ತಹಶೀಲ್ದಾರರು ತಾತ್ಕಾಲಿಕವಾಗಿ ತಾಲ್ಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯನಿರ್ವಹಿಸಿ, ಮುಚ್ಚಿದ ದಾರಿಗಳನ್ನು ತೆರೆಯುವ ಹಾಗೂ ರೈತರಿಗೆ ಸುಗಮ ಪ್ರವೇಶ ಒದಗಿಸುವ ಅಧಿಕಾರ ಹೊಂದಿರುತ್ತಾರೆ.
ಇದೇ ಸಂದರ್ಭದಲ್ಲಿ, The Indian Easement Act, 1882 ಪ್ರಕಾರ, ಪ್ರತಿಯೊಬ್ಬ ಭೂಮಾಲೀಕರಿಗೂ ತಮ್ಮ ಜಮೀನಿನ ಬಳಕೆ ಮತ್ತು ಪ್ರವೇಶ ಹಕ್ಕುಗಳಿವೆ. ಈ ಹಕ್ಕುಗಳನ್ನು ಬೇರೆ ಯಾರೂ ಹಸ್ತಕ್ಷೇಪ ಮಾಡಬಾರದು ಎಂಬುದು ಕಾನೂನು. (farmer road rights Karnataka)
ಸರ್ಕಾರದ ಈ ಆದೇಶದಂತೆ, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿನ ಗ್ರಾಮ ನಕ್ಷೆಗಳಲ್ಲಿ ಗುರುತಿಸಲ್ಪಟ್ಟ ದಾರಿಗಳನ್ನು ಪರಿಶೀಲಿಸಿ, ರೈತರಿಗೆ ಯಾವುದೇ ಅಡ್ಡಿ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಈ ಕ್ರಮದ ಉದ್ದೇಶ: ರೈತರು ತಮ್ಮ ಕೃಷಿ ಯಂತ್ರೋಪಕರಣಗಳು, ಉತ್ಪನ್ನಗಳು ಹಾಗೂ ಸರಕುಗಳನ್ನು ಸುಗಮವಾಗಿ ಸಾಗಿಸಲು ಮಾರ್ಗ ಸುಧಾರಣೆ ಮಾಡುವುದು ಮತ್ತು ಸ್ಥಳೀಯ ವಿವಾದಗಳಿಂದ ಗ್ರಾಮೀಣ ಶಾಂತಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ







