ಕರ್ನಾಟಕ ಸರ್ಕಾರವು (Karnataka Government) ಗ್ರಾಮೀಣ ಜನತೆಗೆ ಮಹತ್ವದ ಸಿಹಿಸುದ್ದಿ ನೀಡಿದೆ. ಈಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಅನಧಿಕೃತ ನಿವೇಶನಗಳು ಮತ್ತು ಕಟ್ಟಡಗಳಿಗೆ (B-Khata system) ಮೂಲಕ ಕಾನೂನುಬದ್ಧ ತೆರಿಗೆ ಪಾವತಿಸುವ ಅವಕಾಶ ಕಲ್ಪಿಸಲಾಗಿದೆ. ಈ ಕ್ರಮದಿಂದ ರಾಜ್ಯಾದ್ಯಂತ ಸುಮಾರು 95 ಲಕ್ಷಕ್ಕೂ ಹೆಚ್ಚು ಅನಧಿಕೃತ ಸ್ವತ್ತುಗಳು ಕಾನೂನು ವ್ಯಾಪ್ತಿಗೆ ಬರುತ್ತವೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (Rural Development and Panchayat Raj Department) ‘ನಮೂನೆ-11ಬಿ’ ರಿಜಿಸ್ಟರ್ನಡಿ ಈ ಸ್ವತ್ತುಗಳ ನೋಂದಣಿ ಪ್ರಕ್ರಿಯೆಯನ್ನು ಅನುಮೋದಿಸಿದೆ. ಇದರಿಂದ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ, ತೆರಿಗೆ ಸಂಗ್ರಹಣೆ ಮತ್ತು ಆಡಳಿತದ ಪಾರದರ್ಶಕತೆ ಹೆಚ್ಚುವ ನಿರೀಕ್ಷೆಯಿದೆ.
ಇತ್ತೀಚಿನ ತಿದ್ದುಪಡಿ ನಿಯಮಗಳ ಪ್ರಕಾರ, (E-Swathu system) ವಿತರಣೆ ಪ್ರಕ್ರಿಯೆ ಸರಳಗೊಳಿಸಲ್ಪಟ್ಟಿದ್ದು, ಮೊದಲು 45 ದಿನಗಳ ಸಮಯಾವಕಾಶ ನೀಡಲಾಗುತ್ತಿದ್ದರೆ, ಈಗ ಕೇವಲ 15 ದಿನಗಳಲ್ಲಿ ಅನುಮೋದನೆ ದೊರೆಯಲಿದೆ. ಅಧಿಕಾರಿಗಳು ನಿಗದಿತ ಅವಧಿಯಲ್ಲಿ ಅನುಮೋದನೆ ನೀಡದಿದ್ದರೆ ಸ್ವಯಂ ಅನುಮೋದನೆಗೆ ಅವಕಾಶವಿದೆ.
ಹೊಸ ನಿಯಮಗಳು (Karnataka Grama Swaraj and Panchayat Raj Rules 2025) ಪ್ರಕಾರ, ಬಿ-ಖಾತಾ ಅಥವಾ ಎ-ಖಾತಾ ಆಸ್ತಿಗಳಿಗೆ ಇ-ಸ್ವತ್ತು ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಗ್ರಾಮ ಪಂಚಾಯಿತಿಯ ಎಲ್ಲಾ ಆಸ್ತಿ ಮಾಹಿತಿಯನ್ನು ಡಿಜಿಟಲ್ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ, ಇದರಿಂದ ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ತಿದ್ದಿಕೊಳ್ಳಲು ಹಾಗೂ ತೆರಿಗೆ ಪಾವತಿಸಲು ಸುಲಭವಾಗುತ್ತದೆ.
ತೆರಿಗೆ ಅಥವಾ ದರಗಳ ಬಗ್ಗೆ ಯಾವುದೇ ವಿವಾದ ಉಂಟಾದಲ್ಲಿ, ಪ್ರಾಥಮಿಕ ಮೇಲ್ಮನವಿ ಉಪ ಕಾರ್ಯದರ್ಶಿ (ಅಭಿವೃದ್ದಿ) ಅವರಿಗೆ ಸಲ್ಲಿಸಬಹುದು ಮತ್ತು ನಂತರದ ಮೇಲ್ಮನವಿಯನ್ನು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಸಲ್ಲಿಸಲು ಅವಕಾಶವಿದೆ. (Property Tax in Karnataka) ಪಾವತಿಸಿದ ಬಳಿಕ ಮೊದಲ ವರ್ಷ ದುಪ್ಪಟ್ಟು ತೆರಿಗೆ ವಿಧಿಸಲಾಗುತ್ತದೆ, ನಂತರದ ವರ್ಷಗಳಲ್ಲಿ ಸಾಮಾನ್ಯ ವಾರ್ಷಿಕ ತೆರಿಗೆಯಷ್ಟೇ ಸಂಗ್ರಹಿಸಲಾಗುತ್ತದೆ.
ಈ ಹೊಸ ಕ್ರಮವು ಗ್ರಾಮೀಣ ಪ್ರದೇಶಗಳ ಆರ್ಥಿಕ ಬಲವರ್ಧನೆಗೆ ಹಾಗೂ (Grama Panchayat Development) ಪ್ರಗತಿಗೆ ನೆರವಾಗಲಿದೆ. ಸರ್ಕಾರದ ಈ ಮುಂದಾಳತ್ವದಿಂದ ಅನಧಿಕೃತ ಆಸ್ತಿಗಳು ಸಹ ಕಾನೂನು ವ್ಯಾಪ್ತಿಗೆ ಸೇರಿ ಗ್ರಾಮ ಪಂಚಾಯಿತಿಗಳ ಸ್ವಂತ ಆದಾಯ ಹೆಚ್ಚುವ ನಿರೀಕ್ಷೆಯಿದೆ.










