ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆ (ITBP) ಮಹಾನಿರ್ದೇಶನಾಲಯವು (ಗ್ರೂಪ್ ಬಿ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ನೇಮಕಾತಿ (ITBP Inspector Recruitment 2025) ಮೂಲಕ ಒಟ್ಟು ಐದು ಇನ್ಸ್‌ಪೆಕ್ಟರ್ (ಲೆಕ್ಕಾಧಿಕಾರಿ) ಹುದ್ದೆಗಳನ್ನು ಡೆಪ್ಯುಟೇಶನ್ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನವೆಂಬರ್ 21, 2025ರೊಳಗೆ ಆಫ್‌ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯ ವೇತನ ಮ್ಯಾಟ್ರಿಕ್ಸ್‌ನ ಹಂತ-7ರಲ್ಲಿ ಇನ್ಸ್‌ಪೆಕ್ಟರ್ (ಕಂಬಟಂಟ್ ಮಿನಿಸ್ಟರಿಯಲ್) ಅಥವಾ ಉಪ-ಇನ್ಸ್‌ಪೆಕ್ಟರ್ ಆಗಿ ಹಂತ-6 (₹35,400–₹1,12,400) ರಲ್ಲಿ ಕನಿಷ್ಠ ಐದು ವರ್ಷಗಳ ನಿಯಮಿತ ಸೇವೆ ಹೊಂದಿರಬೇಕು. ಕೇಂದ್ರ ಸರ್ಕಾರದ ಸಚಿವಾಲಯಗಳಲ್ಲಿಯೂ ಇದೇ ರೀತಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಅಥವಾ ಇಲಾಖೆಯ ಸಹಾಯಕರು ಸಹ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಇನ್ಸ್ಟಿಟ್ಯೂಟ್ ಆಫ್ ಸೆಕ್ರೆಟರಿಯೇಟ್ ಟ್ರೈನಿಂಗ್ ಅಂಡ್ ಮ್ಯಾನೇಜ್ಮೆಂಟ್ ನಡೆಸುವ ಕ್ಯಾಶ್ ಅಂಡ್ ಅಕೌಂಟ್ಸ್ ಕೋರ್ಸ್‌ನಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಕ್ಯಾಶ್, ಅಕೌಂಟ್ಸ್ ಮತ್ತು ಬಜೆಟ್ ಕಾರ್ಯಗಳಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಅಗತ್ಯವಾಗಿದೆ. ನವೆಂಬರ್ 21, 2025ರ ವೇಳೆಗೆ ಗರಿಷ್ಠ ವಯೋಮಿತಿ 56 ವರ್ಷಗಳನ್ನು ಮೀರಬಾರದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹44,900 ರಿಂದ ₹1,42,400 ವರೆಗೆ ವೇತನ ನೀಡಲಾಗುತ್ತದೆ. ಅರ್ಜಿ ಶುಲ್ಕವನ್ನು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿಲ್ಲ. ಆಸಕ್ತ ಅಭ್ಯರ್ಥಿಗಳು ITBP ಅಧಿಕೃತ ಜಾಲತಾಣ itbpolice.nic.in ಮೂಲಕ ಅರ್ಜಿ ನಮೂನೆ ಡೌನ್ಲೋಡ್ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ನವೆಂಬರ್ 21ರೊಳಗೆ ಕಳುಹಿಸಬೇಕು –
ವಿಳಾಸ:
Senior Admin Officer (Estate),
Directorate General, ITBP,
MHA/Govt of India, Block-2,
CGO Complex, Lodhi Road, New Delhi – 110003
ಅಭ್ಯರ್ಥಿಗಳು 2019ರಿಂದ 2023ರವರೆಗೆ ನವೀಕೃತ ACR/APAR ದಾಖಲೆಗಳು, DE/ವಿಜಿಲೆನ್ಸ್ ಕ್ಲಿಯರೆನ್ಸ್ ಪ್ರಮಾಣಪತ್ರ ಹಾಗೂ ಸಮಗ್ರತಾ ಪ್ರಮಾಣ ಪತ್ರಗಳನ್ನು ಸೇರಿಸಬೇಕು.
ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
Official Links:
🔹 Official ITBP Notification PDF
🔹 Employment News Short Notification
🔹 Official Website – itbpolice.nic.in












