ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅನೇಕ ಮಹಿಳೆಯರು ತಮ್ಮ ಖಾತೆಗೆ ₹2000 ನಗದು ಸಹಾಯಧನವನ್ನು ಪಡೆದಿದ್ದಾರೆ. ಆದರೆ ಕೆಲವು ಮಹಿಳೆಯರ ಖಾತೆಗೆ ಹಣ ಇನ್ನೂ ಬಂದಿಲ್ಲ ಎಂಬ ಅಸಮಾಧಾನವೂ ಕೇಳಿಬರುತ್ತಿದೆ. ನೀವು ಸಹ ಇನ್ನೂ ಹಣವನ್ನು ಪಡೆಯದವರಲ್ಲಿ ಒಬ್ಬರಾಗಿದ್ದರೆ, ನಿಮ್ಮ ಅರ್ಜಿ ತಿರಸ್ಕೃತವಾಗಿದೆಯೇ ಅಥವಾ (Gruhalakshmi Cancelled List) ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯ.
ಯಾರು ಹಣದಿಂದ ವಂಚಿತರಾದರು?
ಸರ್ಕಾರವು ಈ ಯೋಜನೆಯನ್ನು ಎಲ್ಲ ಮಹಿಳೆಯರಿಗೂ ನೀಡುವ ಬದಲು, ಕೆಲವು ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ಮಾತ್ರ ಲಾಭ ನೀಡುತ್ತಿದೆ. ಅಂದರೆ BPL ಕುಟುಂಬದ ಮುಖ್ಯಸ್ಥ ಮಹಿಳೆಗೆ ಮಾತ್ರ ಈ ₹2000 ಸಹಾಯ ಲಭ್ಯ. ಕೆಳಗಿನ ವರ್ಗದವರು ಯೋಜನೆಯ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ:
-
5 ಎಕರೆಗಿಂತ ಹೆಚ್ಚು ಬಿತ್ತನೆ ಭೂಮಿ ಹೊಂದಿರುವವರು
-
ನಾಲ್ಕು ಚಕ್ರಗಳ ವಾಹನ (Four-Wheeler) ಹೊಂದಿರುವವರು
-
ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸುವವರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿ
-
ಸರ್ಕಾರಿ ಪಿಂಚಣಿ ಪಡೆಯುವವರು
-
ಆದಾಯ ತೆರಿಗೆ (Income Tax) ಪಾವತಿದಾರರು
-
ಜಿಎಸ್ಟಿ ರಿಟರ್ನ್ (GST Return) ಸಲ್ಲಿಸುವ ಮಹಿಳೆಯರು
-
ವೃತ್ತಿ ತೆರಿಗೆ (Professional Tax) ಪಾವತಿದಾರರು
ಈ ಕಾರಣಗಳಿಂದಾಗಿ ಹಲವಾರು ಅರ್ಜಿಗಳು ತಿರಸ್ಕೃತಗೊಂಡಿವೆ ಮತ್ತು ಕೆಲವು ಹೆಸರನ್ನು ಅನರ್ಹರ ಪಟ್ಟಿಗೆ ಸೇರಿಸಲಾಗಿದೆ.
ಅನರ್ಹರ ಪಟ್ಟಿಯನ್ನು ಹೇಗೆ ಪರಿಶೀಲಿಸಬಹುದು?
1️⃣ ಮೊದಲು ಆಹಾರ ಇಲಾಖೆಯ ಅಧಿಕೃತ ಜಾಲತಾಣ https://ahara.karnataka.gov.in/Home/EServices ಗೆ ಭೇಟಿ ನೀಡಿ.
2️⃣ ನಂತರ ಮೇಲ್ಭಾಗದಲ್ಲಿರುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ.
3️⃣ “e-Ration Card” ಆಯ್ಕೆಯಡಿ “Show cancelled/Suspended” ಆಯ್ಕೆಯನ್ನು ಆಯ್ಕೆಮಾಡಿ.
4️⃣ ನಂತರ ನಿಮ್ಮ ಜಿಲ್ಲೆ, ತಾಲೂಕು ಮತ್ತು ತಿಂಗಳು ಆಯ್ಕೆ ಮಾಡಿದ ಬಳಿಕ ಪಟ್ಟಿ ತೆರೆಯುತ್ತದೆ.
5️⃣ ಇಲ್ಲಿ ನಿಮ್ಮ ಹೆಸರು ಸೇರಿತೇ ಹಾಗೂ ತಿರಸ್ಕಾರದ ಕಾರಣವನ್ನು ಕೂಡಾ ನೋಡಬಹುದು.
ಈ ರೀತಿಯಾಗಿ ನೀವು (Gruhalakshmi Yojana Status Check) ಮೂಲಕ ನಿಮ್ಮ ಅರ್ಜಿಯ ಸ್ಥಿತಿ ತಿಳಿದುಕೊಳ್ಳಬಹುದು. ಸರ್ಕಾರದಿಂದ ಮುಂದಿನ ಹಂತಗಳಲ್ಲಿ ಸಹ ಹಣ ವರ್ಗಾವಣೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದ್ದು, ಅಧಿಕೃತ ಜಾಲತಾಣವನ್ನು ನಿರಂತರವಾಗಿ ಪರಿಶೀಲಿಸುವುದು ಸೂಕ್ತ.










