ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಂದು ಇಳಿಕೆಯ ಹಾದಿ ಹಿಡಿದಿವೆ. ಕಳೆದ ಕೆಲವು ದಿನಗಳಿಂದ ಏರಿಕೆ ಕಂಡಿದ್ದ (gold rate today Bangalore) ಬೆಲೆಗಳು ಮಂಗಳವಾರ ಸ್ವಲ್ಪ ಮಟ್ಟಿಗೆ ಕುಸಿದಿವೆ. 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 11,290 ರೂನಿಂದ 11,225 ರೂಗೆ ಇಳಿಕೆಯಾಗಿದೆ. 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ ಪ್ರತಿ ಗ್ರಾಂಗೆ 12,246 ರೂ ಆಗಿದೆ. ಬೆಳ್ಳಿ ಬೆಲೆಯೂ ಸಹ ತುಸು ಇಳಿಕೆಯಾಗಿದೆ — ಮುಂಬೈ, ಬೆಂಗಳೂರು ನಗರಗಳಲ್ಲಿ ಪ್ರತಿ ಗ್ರಾಂಗೆ 151 ರೂ ಆಗಿದ್ದು, ಚೆನ್ನೈ ಹಾಗೂ ಕೇರಳದಲ್ಲಿ 165 ರೂಗೆ ಕುಸಿದಿದೆ.
ಚಿನ್ನದ ಈ ಇಳಿಕೆಯು ಅಂತರರಾಷ್ಟ್ರೀಯ ಮಾರುಕಟ್ಟೆಯ ಚಲನೆಗೂ ಸಂಬಂಧಿಸಿದೆ. ನಿನ್ನೆ 15 ರೂ ಏರಿದ್ದ ಚಿನ್ನ ಇಂದು 65 ರೂ ಕುಸಿದಿದೆ, ಹಾಗೆಯೇ ನಿನ್ನೆ 2 ರೂ ಏರಿದ್ದ ಬೆಳ್ಳಿ ಇಂದು 3 ರೂ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,12,250 ಆಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ₹1,22,460 ಇದೆ. 100 ಗ್ರಾಂ ಬೆಳ್ಳಿ ಬೆಲೆ ₹15,100 ಆಗಿದೆ.
ವಿವಿಧ ನಗರಗಳಲ್ಲಿ ಚಿನ್ನದ ಬೆಲೆಗಳಲ್ಲಿ ಅಲ್ಪ ವ್ಯತ್ಯಾಸಗಳಿವೆ: ಚೆನ್ನೈನಲ್ಲಿ ಪ್ರತಿ ಗ್ರಾಂ 11,250 ರೂ, ದೆಹಲಿಯಲ್ಲಿ 11,240 ರೂ, ಅಹ್ಮದಾಬಾದ್ ಮತ್ತು ಕೋಲ್ಕತಾದಲ್ಲಿ 11,225 ರೂ ಇದೆ. ವಿದೇಶಗಳಲ್ಲಿ ಮಲೇಷ್ಯಾದಲ್ಲಿ ಚಿನ್ನದ ಬೆಲೆ 11,046 ರೂ, ದುಬೈಯಲ್ಲಿ 10,811 ರೂ, ಹಾಗೂ ಅಮೆರಿಕಾದಲ್ಲಿ 11,035 ರೂ ಸುತ್ತಮುತ್ತಾ ಇದೆ.
ಗಮನಿಸಬೇಕಾದದ್ದು ಎಂದರೆ, ಇಲ್ಲಿ ನೀಡಿರುವ ದರಗಳು ಅಂದಾಜಿನವಾಗಿದ್ದು, ಪ್ರತಿಯೊಂದು ಅಭರಣದಂಗಡಿಗಳಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್ ಸೇರಿ ಬೆಲೆ ಬದಲಾಗಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.










