ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಡಿಸೆಂಬರ್ 2025ರಲ್ಲಿ ನಡೆಯಲಿರುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದೆ ಎಂದು ನಿರ್ದೇಶಕ (ಪರೀಕ್ಷೆ) ಹೆಚ್.ಎನ್. ಗೋಪಾಲಕೃಷ್ಣ ತಿಳಿಸಿದ್ದಾರೆ. ಈ ಪರೀಕ್ಷೆಗೆ ಸರ್ಕಾರಿ ಹಾಗೂ ಅನುದಾನಿತ, ಅನುದಾನರಹಿತ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಖಾಸಗಿ ಅಭ್ಯರ್ಥಿಗಳು ಭಾಗವಹಿಸಬಹುದು. ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 15, 2025 ಆಗಿದೆ.
🖊️ ಅರ್ಜಿ ಸಲ್ಲಿಕೆ ಮತ್ತು ಅರ್ಹತೆ
ಅರ್ಜಿ ಸಲ್ಲಿಸುವವರು ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು. ಪ್ರಸ್ತುತ 8, 9 ಅಥವಾ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ SATS ಸಂಖ್ಯೆ ಹೊಂದಿರುವ ವಿದ್ಯಾರ್ಥಿಗಳು (regular candidates) ಎಂದು ಪರಿಗಣಿಸಲ್ಪಡುತ್ತಾರೆ. SATS ಸಂಖ್ಯೆ ಇಲ್ಲದವರು ಖಾಸಗಿ ಅಭ್ಯರ್ಥಿಗಳೆಂದು ಪರಿಗಣಿಸಲಾಗುತ್ತದೆ. ಎರಡೂ ವರ್ಗದ ಅಭ್ಯರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಡ್ರಾಯಿಂಗ್ ಗ್ರೇಡ್ ಪರೀಕ್ಷೆ ಎರಡು ಹಂತಗಳಲ್ಲಿ — ಲೋಯರ್ ಮತ್ತು ಹೈಯರ್ — ನಡೆಯುತ್ತದೆ. ಅಭ್ಯರ್ಥಿಗಳು ಲೋಯರ್ ಪರೀಕ್ಷೆ ಬರೆದೆ ನೇರವಾಗಿ ಹೈಯರ್ ಪರೀಕ್ಷೆಗೆ ಹಾಜರಾಗಬಹುದು, ಆದರೆ ಎರಡನ್ನೂ ಒಂದೇ ಬಾರಿ ಬರೆಲು ಅವಕಾಶವಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.
📄 ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳಲ್ಲಿ SATS ಸಂಖ್ಯೆ, ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ (ಆಧಾರ್ ಜೋಡಣೆ ಇರುವ), ಇ-ಮೇಲ್ ಐಡಿ, ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರ ಸೇರಿದಂತೆ ಅಗತ್ಯ ಪ್ರಮಾಣ ಪತ್ರಗಳು ಇರಬೇಕು.
💰 ಪರೀಕ್ಷಾ ಶುಲ್ಕ
ಲೋಯರ್ ಮತ್ತು ಹೈಯರ್ ಪರೀಕ್ಷೆಗಳಿಗೆ ಪ.ಜಾ/ಪ.ಪಂ. ಅಭ್ಯರ್ಥಿಗಳಿಗೆ ₹20 ಮತ್ತು ಉಳಿದವರಿಗೆ ₹280 ನಿಗದಿಪಡಿಸಲಾಗಿದೆ.
🌐 ಅರ್ಜಿ ಸಲ್ಲಿಸುವ ವಿಧಾನ
ಅಭ್ಯರ್ಥಿಗಳು ತಮ್ಮ ಜಿಲ್ಲಾ ವ್ಯಾಪ್ತಿಯ ಅನುಮೋದಿತ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ನಂತರ, ಕೇಂದ್ರದ ಮುಖ್ಯಸ್ಥರು ಅಭ್ಯರ್ಥಿಗಳ ಮಾಹಿತಿಯನ್ನು ಮಂಡಳಿಯ ಜಾಲತಾಣ https://kseeb.karnataka.gov.in/DrawingOnlineApplication/loginpage.aspx ಮುಖಾಂತರ ಅಪ್ಲೋಡ್ ಮಾಡಬೇಕಾಗಿದೆ.
ಈ ಪರೀಕ್ಷೆಯು ಕಲಾ ಪ್ರತಿಭೆ ಅಭಿವೃದ್ಧಿಗೆ ಉತ್ತಮ ವೇದಿಕೆಯಾಗಿದ್ದು, ಅಭ್ಯರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಮಾನ್ಯತೆ ನೀಡುತ್ತದೆ.










