ಗುಪ್ತಚರ ಬ್ಯೂರೋ (IB) ಇಲಾಖೆಯು (Junior Intelligence Officer Grade-II) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಅಕ್ಟೋಬರ್ 15, 2025 ರಂದು ನಡೆದ ಲಿಖಿತ ಪರೀಕ್ಷೆಯ ಉತ್ತರ ಕೀಲಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಮೂಲಕ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪರಿಶೀಲಿಸಿ, ಯಾವುದೇ ಅಕ್ಷೇಪಣೆಗಳಿದ್ದರೆ ಆಕ್ಷೇಪಣೆ ಸಲ್ಲಿಸುವ ಅವಕಾಶವನ್ನು ಪಡೆಯಬಹುದು.
ಆಗಸ್ಟ್ 2025ರಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಪ್ರಕಾರ ಒಟ್ಟು 394 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿತ್ತು. ಇದೀಗ ಲಿಖಿತ ಪರೀಕ್ಷೆಯ (IB Answer Key 2025) ಬಿಡುಗಡೆಗೊಂಡಿರುವುದರಿಂದ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://cdn.digialm.com/EForms/configuredHtml/1258/94260/login.html ಗೆ ಭೇಟಿ ನೀಡಿ ತಮ್ಮ ನೋಂದಣಿ ವಿವರಗಳನ್ನು ಬಳಸಿ ಲಾಗಿನ್ ಆಗಿ, ಕೀಲಿ ಉತ್ತರಗಳನ್ನು ಪರಿಶೀಲಿಸಬಹುದು.
ಉತ್ತರ ಕೀಲಿಯನ್ನು ಪರಿಶೀಲಿಸುವ ವಿಧಾನ:
-
ಮೊದಲು IB ಅಧಿಕೃತ ಲಾಗಿನ್ ಪೋರ್ಟಲ್‌ಗೆ ಭೇಟಿ ನೀಡಿ.
-
ನೋಂದಣಿ ಐಡಿ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಲಾಗಿನ್ ಆಗಿ.
-
ನಂತರ “Intelligence Bureau Junior Intelligence Officer Grade-II (Technical) Answer Key 2025” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.
-
ಪ್ರಕಟಿತ ಉತ್ತರ ಕೀಲಿಯನ್ನು ಡೌನ್‌ಲೋಡ್ ಮಾಡಿ ಪರಿಶೀಲಿಸಿ.
-
ಯಾವುದೇ ಅಸಮಾಧಾನಗಳಿದ್ದರೆ, ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಆಯ್ಕೆಯ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.
ಈ ಪರೀಕ್ಷೆ ಕರ್ನಾಟಕದ ಅಭ್ಯರ್ಥಿಗಳಿಗೂ ಅತ್ಯಂತ ಪ್ರಮುಖವಾಗಿದ್ದು, ಕೇಂದ್ರ ಸರ್ಕಾರದ ಅಡಿಯಲ್ಲಿ ತಾಂತ್ರಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದೆ. (IB Karnataka recruitment), (Junior Intelligence Officer exam), (IB answer key 2025), (MHA jobs), (central government jobs Karnataka), (technical officer posts), (Intelligence Bureau vacancies), (Karnataka job update), (government exam 2025), (IB login portal).












