ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ (Bharat Electronics Limited) ಸಂಸ್ಥೆಯು 2025-26 ನೇ ಸಾಲಿನ ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ (BEL Recruitment 2025 Karnataka) ಪ್ರಕ್ರಿಯೆಯಲ್ಲಿ ಎಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ (EAT) ಹಾಗೂ ತಂತ್ರಜ್ಞ-ಸಿ (Technician-C) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹುದ್ದೆಗಳ ವಿವರಗಳು ಮತ್ತು ಅರ್ಹತೆ:
ಅಭ್ಯರ್ಥಿಗಳು (Electronics, Mechanical, Computer Science, Electrical, Fitter, Machinist, Electrician) ವಿಭಾಗಗಳಲ್ಲಿ ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್ ಸಹಾಯಕ ಶಿಕ್ಷಣಾರ್ಥಿ ಹುದ್ದೆಗೆ ಮೂರು ವರ್ಷದ ಎಂಜಿನಿಯರಿಂಗ್ ಡಿಪ್ಲೊಮಾ ಅಗತ್ಯವಿದೆ, ತಂತ್ರಜ್ಞ-ಸಿ ಹುದ್ದೆಗೆ ಎಸ್ಸೆಸ್ಸೆಲ್ಸಿ ಜೊತೆಗೆ ಐಟಿಐ ಪೂರೈಸಿರಬೇಕು. ಸಾಮಾನ್ಯ, ಇಡಬ್ಲ್ಯೂಎಸ್ ಮತ್ತು ಒಬಿಸಿ ಅಭ್ಯರ್ಥಿಗಳು ಕನಿಷ್ಠ ಶೇ.60 ಹಾಗೂ ಪ.ಜಾತಿ, ಪ.ಪಂ ಮತ್ತು ಅಂಗವಿಕಲ ಅಭ್ಯರ್ಥಿಗಳು ಶೇ.50 ಅಂಕ ಪಡೆದು ತೇರ್ಗಡೆ ಹೊಂದಿರಬೇಕು.
ವಯೋಮಿತಿ:
1 ಅಕ್ಟೋಬರ್ 2025 ರಂತೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯಸ್ಸಿನವರು ಅರ್ಹರು.
ಆಯ್ಕೆ ಪ್ರಕ್ರಿಯೆ:
ಅರ್ಜಿಗಳನ್ನು ಶಾರ್ಟ್ ಲಿಸ್ಟ್ ಮಾಡುವುದರೊಂದಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ನಡೆಯಲಿದೆ.
ಸಂಬಳ:
EAT ಹುದ್ದೆಗಳಿಗೆ ರೂ.24,500 ರಿಂದ ರೂ.90,000 ಹಾಗೂ Technician-C ಹುದ್ದೆಗಳಿಗೆ ರೂ.21,500 ರಿಂದ ರೂ.82,000 ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ₹590 (500 + 18% GST) ಪಾವತಿಸಬೇಕಾಗುತ್ತದೆ. ಪ.ಜಾತಿ, ಪ.ಪಂ, ಅಂಗವಿಕಲ ಹಾಗೂ ಮಾಜಿ ಸೈನಿಕರಿಗೆ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆ ವಿಧಾನ:
ಅಭ್ಯರ್ಥಿಗಳು https://jobapply.in/BEL2025BNGEATTech/ ಗೆ ಭೇಟಿ ನೀಡಿ “Home → Careers → Job Notifications” ಆಯ್ಕೆಮಾಡಿ, “Apply Online for Non-Executives for Bangalore Complex” ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದು. ಹೊಸ ಅಭ್ಯರ್ಥಿಗಳು ನೋಂದಣಿ ಮಾಡಿ, ಮಾಹಿತಿಯನ್ನು ಸರಿಯಾಗಿ ತುಂಬಿ, ನಂತರ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಬಹುದು.
ಮುಖ್ಯ ದಿನಾಂಕಗಳು:
ಅರ್ಜಿ ಪ್ರಾರಂಭ: ಅಕ್ಟೋಬರ್ 15, 2025
ಅರ್ಜಿ ಕೊನೆ ದಿನ: ನವೆಂಬರ್ 4, 2025
ಈ ನೇಮಕಾತಿ ಕರ್ನಾಟಕದ ಅಭ್ಯರ್ಥಿಗಳಿಗೆ ಉತ್ತಮ ಸರ್ಕಾರಿ ಉದ್ಯೋಗ ಅವಕಾಶವಾಗಿದ್ದು, ತಾಂತ್ರಿಕ ಶಿಕ್ಷಣ ಪಡೆದವರಿಗೆ ಚಿನ್ನದ ಅವಕಾಶವಾಗಿದೆ.












