ಬೆಂಗಳೂರು ನಗರದಲ್ಲಿ (Bengaluru Traffic Signal) ಈಗ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಹಸಿರು ಮತ್ತು ಕೆಂಪು ನಿಶಾನೆಯ ಸಮಯವನ್ನು ನೈಜ ಸಮಯದಲ್ಲಿ (real time) ಮ್ಯಾಪಲ್ಸ್ ಆಯಪ್ (Mappls App) ಮೂಲಕ ವೀಕ್ಷಿಸಲು ಅವಕಾಶ ದೊರೆಯಲಿದೆ. ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಯಾಣಿಕರಿಗೆ ಸುಲಭ ಮಾಹಿತಿ ನೀಡಲು ಈ ಯೋಜನೆಯನ್ನು (AI Traffic System) ಮೊಟ್ಟ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದೆ.
ನಗರದ 169 ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಕೃತಕ ಬುದ್ಧಿಮತ್ತೆ (Artificial Intelligence) ಆಧಾರಿತ ಅಡ್ಯಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಮ್ (ATCS) ಮೂಲಕ ಪ್ರತಿಯೊಂದು ಸಿಗ್ನಲ್‌ನ ಕಾಲಮಿತಿಯನ್ನು ನಿಗದಿಪಡಿಸಲಾಗುತ್ತದೆ. ಈ ಸ್ಮಾರ್ಟ್ ಸಿಗ್ನಲ್‌ಗಳು (Smart Signals) ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ಹಸಿರು ಅಥವಾ ಕೆಂಪು ನಿಶಾನೆ ನೀಡುತ್ತವೆ. ಹಳೆಯ ಸಮಯ ನಿಯಂತ್ರಣ ವ್ಯವಸ್ಥೆಯನ್ನು ಬದಲಿಸಿ, ಈಗ ವಾಹನ ಆಕ್ಚುಯೇಟೆಡ್ ಕಂಟ್ರೋಲ್ (VAC) ತಂತ್ರಜ್ಞಾನದ ಮೂಲಕ ಸಿಗ್ನಲ್‌ಗಳ ಸಮಯವನ್ನು ಬದಲಾಯಿಸಲಾಗುತ್ತಿದೆ.
ಮ್ಯಾಪಲ್ಸ್ ಆಯಪ್‌ನಲ್ಲಿ ಸಿಗ್ನಲ್‌ನಿಂದ ಸುಮಾರು 500 ಮೀಟರ್ ದೂರದಲ್ಲೇ (real time traffic update) ಹಸಿರು ಅಥವಾ ಕೆಂಪು ನಿಶಾನೆ ಬದಲಾಗಲು ಎಷ್ಟು ಸೆಕೆಂಡ್‌ಗಳಿವೆ ಎಂಬ ಮಾಹಿತಿ ಪ್ರಯಾಣಿಕರಿಗೆ ಲಭ್ಯವಾಗುತ್ತದೆ. ಈ ವೈಶಿಷ್ಟ್ಯವು (traffic countdown feature) ಪ್ರಯಾಣಿಕರಿಗೆ ಬೇರೆ ಮಾರ್ಗಗಳನ್ನು ಆಯ್ಕೆಮಾಡಲು ಹಾಗೂ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ಸಹಕಾರಿಯಾಗಲಿದೆ.
ಸಂಚಾರ ಪೊಲೀಸ್ ಇಲಾಖೆ (Bengaluru Traffic Police), ಅರ್ಕಾಡಿಸ್ ಇಂಡಿಯಾ (Arcadis India), ಮತ್ತು ಮ್ಯಾಪ್ ಮೈ ಇಂಡಿಯಾ (MapMyIndia) ಒಟ್ಟಾಗಿ ಈ ಉಪಕ್ರಮವನ್ನು ಜಾರಿಗೊಳಿಸಿದ್ದು, ಸಂಚಾರ ವ್ಯವಸ್ಥೆಯ ಸುಧಾರಣೆಗೆ ದೊಡ್ಡ ಹೆಜ್ಜೆ ಇರಿಸಿದೆ. ಈ ಮೂಲಕ ನಗರದ ವಾಹನ ಸಂಚಾರದ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.
ಮ್ಯಾಪ್ ಮೈ ಇಂಡಿಯಾ ನಿರ್ದೇಶಕ ರೋಹನ್ ವರ್ಮಾ (Rohan Verma) ಅವರು, “ಮ್ಯಾಪಲ್ಸ್ ಆಯಪ್ ಭಾರತದಲ್ಲಿ ತಾಂತ್ರಿಕ ಆವಿಷ್ಕಾರಗಳ ಸಾಕ್ಷಿಯಾಗಿದೆ. ಟ್ರಾಫಿಕ್ ಸಿಗ್ನಲ್ ಸಮಯದ ನಿಖರ ಮಾಹಿತಿಯನ್ನು ನೀಡುವುದು ನಮ್ಮ ಮುಂದಿನ ಸ್ಮಾರ್ಟ್ ಸಿಟಿ ದೃಷ್ಟಿಯ ಭಾಗವಾಗಿದೆ” ಎಂದು ತಿಳಿಸಿದ್ದಾರೆ.







