AFCAT 2025 Notification: ವಾಯುಪಡೆಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ರಾಷ್ಟ್ರಸೇವೆಗೆ ಸುವರ್ಣಾವಕಾಶ!

Published On: November 8, 2025
Follow Us

ಭಾರತೀಯ ವಾಯುಪಡೆಯು (AFCAT 2025 Notification) ಸಾಮಾನ್ಯ ಪ್ರವೇಶ ಪರೀಕ್ಷೆ ಹಾಗೂ ಎನ್‌ಸಿಸಿ ವಿಶೇಷ ಪ್ರವೇಶಕ್ಕಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಫ್ಲೈಯಿಂಗ್ ಮತ್ತು ಗ್ರೌಂಡ್ ಡ್ಯೂಟಿ ಶಾಖೆಯ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳಿಗೆ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಾಯುಪಡೆ ವೃತ್ತಿಯನ್ನು ಆರಿಸಬೇಕೆಂದಿರುವ ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://afcat.cdac.in/AFCAT/ ಗೆ ಭೇಟಿ ನೀಡಿ ನವೆಂಬರ್ 10ರಿಂದ ಡಿಸೆಂಬರ್ 9ರವರೆಗೆ ಅರ್ಜಿ ಸಲ್ಲಿಸಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

📅 ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು

  • ಅರ್ಜಿ ಪ್ರಾರಂಭ ದಿನಾಂಕ: ನವೆಂಬರ್ 10, 2025

  • ಕೊನೆಯ ದಿನಾಂಕ: ಡಿಸೆಂಬರ್ 9, 2025

🎓 ಶೈಕ್ಷಣಿಕ ಅರ್ಹತೆ

ಫ್ಲೈಯಿಂಗ್ ಬ್ರಾಂಚ್: ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಗಣಿತ ಮತ್ತು ಭೌತಶಾಸ್ತ್ರದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು ಹಾಗೂ ಸಂಬಂಧಿತ ವಿಭಾಗದಲ್ಲಿ ಪದವಿ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು.

ಗ್ರೌಂಡ್ ಡ್ಯೂಟಿ (ತಾಂತ್ರಿಕ ಮತ್ತು ತಾಂತ್ರಿಕೇತರ): ಇದೇ ರೀತಿಯ ಗಣಿತ ಮತ್ತು ಭೌತಶಾಸ್ತ್ರ ಅಂಕಗಳೊಂದಿಗೆ ದ್ವಿತೀಯ ಪಿಯುಸಿ ಹಾಗೂ ಸಂಬಂಧಿತ ಕ್ಷೇತ್ರದ ಪದವಿ ಅಗತ್ಯವಿದೆ.

🧑‍🎓 ವಯೋಮಿತಿ

  • ಫ್ಲೈಯಿಂಗ್ ಬ್ರಾಂಚ್: 20 ರಿಂದ 24 ವರ್ಷ

  • ಗ್ರೌಂಡ್ ಡ್ಯೂಟಿ: 20 ರಿಂದ 26 ವರ್ಷ

🧾 ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳು ಲಿಖಿತ ಪರೀಕ್ಷೆ, ವಾಯುಪಡೆ ಆಯ್ಕೆ ಮಂಡಳಿ (AFSB) ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಹಂತಗಳಲ್ಲಿ ಆಯ್ಕೆಗೊಳ್ಳುತ್ತಾರೆ.

💰 ಸಂಬಳ ಮತ್ತು ಶುಲ್ಕ

ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹56,100 – ₹1,77,500 ವೇತನ ನೀಡಲಾಗುತ್ತದೆ. (AFCAT 2025 Recruitment) ಅರ್ಜಿ ಶುಲ್ಕವಾಗಿ ₹500 + GST ಪಾವತಿಸಬೇಕಿರುತ್ತದೆ.

🖥️ ಅರ್ಜಿ ಸಲ್ಲಿಸುವ ವಿಧಾನ

  1. https://afcat.cdac.in/AFCAT/ ಗೆ ಭೇಟಿ ನೀಡಿ.

  2. “AFCAT-01/2026 / NCC Special Entry” ಲಿಂಕ್‌ ಮೇಲೆ ಕ್ಲಿಕ್ ಮಾಡಿ.

  3. ಹೊಸ ಬಳಕೆದಾರರು ನೋಂದಣಿ ಮಾಡಿಕೊಳ್ಳಿ ಅಥವಾ ಲಾಗಿನ್ ಆಗಿ.

  4. ವಿವರಗಳು, ಫೋಟೋ, ಸಹಿ ಹಾಗೂ ಶೈಕ್ಷಣಿಕ ದಾಖಲೆಗಳನ್ನು ಅಪ್ಲೋಡ್ ಮಾಡಿ.

  5. ಅರ್ಜಿ ಶುಲ್ಕ ಪಾವತಿಸಿ, ಕೊನೆಯಲ್ಲಿ ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.

Join WhatsApp

Join Now

Join Telegram

Join Now

Related Posts

Anganwadi Recruitment 2025: ಹಾವೇರಿ ಜಿಲ್ಲೆಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ!

November 8, 2025

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಇನ್ಸ್ಪೆಕ್ಟರ್ (ಲೆಕ್ಕಾಧಿಕಾರಿ) ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ ಪ್ರಕಟ!

November 5, 2025

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ Group C ಮತ್ತು Group D ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ ಪ್ರಕಟ!

November 5, 2025

ರಾಜ್ಯದಲ್ಲಿ ಬರೋಬ್ಬರಿ 18000′ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : CM ಸಿದ್ದರಾಮಯ್ಯ

November 4, 2025

BMRCL ನೇಮಕಾತಿ 2025: “ನಮ್ಮ ಮೆಟ್ರೋ”ಯಲ್ಲಿ ಸೂಪರ್ವೈಸರ್ ಹುದ್ದೆಗಳ ಭರ್ತಿ – ಅರ್ಜಿ ಪ್ರಕ್ರಿಯೆ ಪ್ರಾರಂಭ!

November 2, 2025

ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದಲ್ಲಿ ವಿವಿಧ ಹುದ್ದೆಗಳ ಭರ್ತಿ – ಕೆಇಎ ಮೂಲಕ ಅರ್ಜಿ ಆಹ್ವಾನ!

November 2, 2025

Leave a Comment