ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ಸಕ್ರಿಯವಾಗಿ ನಡೆಯುತ್ತಿರುವ ಈ ವೇಳೆ, (Police Constable Recruitment Karnataka 2025) ಗೃಹ ಇಲಾಖೆಯಲ್ಲಿಯೂ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪರವಾಗಿ ವಯೋಮಿತಿಯನ್ನು (Age Limit Increase for Police Constable) ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ.
ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಬರೆದ ಪತ್ರದಲ್ಲಿ, ಪ್ರಸ್ತುತ ಸಾಮಾನ್ಯ ವರ್ಗಕ್ಕೆ ಇರುವ 26 ವರ್ಷ ವಯೋಮಿತಿಯನ್ನು 30 ವರ್ಷಗಳಿಗೆ ಹಾಗೂ ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗಕ್ಕೆ ಇರುವ 29 ವರ್ಷ ವಯೋಮಿತಿಯನ್ನು 33 ವರ್ಷಗಳಿಗೆ ಏರಿಕೆ ಮಾಡುವಂತೆ ಕೇಳಿಕೊಂಡಿದೆ. ವಿದ್ಯಾರ್ಥಿ ಸಂಘದ ಪ್ರಕಾರ, (Karnataka Police Recruitment Rules) ಇತರ ರಾಜ್ಯಗಳಲ್ಲಿ ವಯೋಮಿತಿ ಹೆಚ್ಚು ಇರುವುದರಿಂದ ಕರ್ನಾಟಕದ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗುತ್ತಿದ್ದಾರೆ.
ಹಿಂದಿನ ಸಂದರ್ಭಗಳಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಮಾನ್ಯ ವರ್ಗಕ್ಕೆ 30 ವರ್ಷ ಮತ್ತು ಎಸ್‌ಸಿ/ಎಸ್‌ಟಿ/ಒಬಿಸಿ ವರ್ಗಕ್ಕೆ 33 ವರ್ಷ ವಯೋಮಿತಿ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ 2024ರ ಸೆಪ್ಟೆಂಬರ್ 20 ರಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಅವರು ವಯೋಮಿತಿಯನ್ನು 33 ವರ್ಷಕ್ಕೆ ಏರಿಸುವ ಬಗ್ಗೆ ಹೇಳಿಕೆ ನೀಡಿದ್ದರೂ, ಸರ್ಕಾರದಿಂದ ಇದುವರೆಗೆ ಯಾವುದೇ ತೀರ್ಮಾನ ಹೊರಬಂದಿಲ್ಲ.
ಬಹಳಷ್ಟು ಅಭ್ಯರ್ಥಿಗಳು ಖಾಸಗಿ ಉದ್ಯೋಗ ಬಿಟ್ಟು ಪೊಲೀಸ್ ನೇಮಕಾತಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ನಿರ್ಧಾರ ಬಾಕಿ ಇರುವುದರಿಂದ ಅಭ್ಯರ್ಥಿಗಳು ಗೊಂದಲದಲ್ಲಿದ್ದಾರೆ. ವಿದ್ಯಾರ್ಥಿ ಸಂಘಗಳು ಸರ್ಕಾರವನ್ನು ತೆಲಂಗಾಣ ಮಾದರಿಯಲ್ಲಿ (Telangana Police Model) ನೀತಿ ತಿದ್ದುಪಡಿ ಮಾಡಿ ನೇಮಕಾತಿಯ ವಯೋಮಿತಿಯನ್ನು ಪರಿಷ್ಕರಿಸಬೇಕೆಂದು ಆಗ್ರಹಿಸುತ್ತಿವೆ.
ಇದೇ ಕುರಿತು ಚಾಮರಾಜನಗರ ಸಂಸದ ಸುನೀಲ್ ಬೋಸ್ ಅವರು ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, (Karnataka Police Constable Age Relaxation) ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಬಡವರ ಮಕ್ಕಳಿಗೆ ಪೊಲೀಸ್ ಸೇವೆಯಲ್ಲಿ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಒಕ್ಕೂಟದ ಅಧ್ಯಕ್ಷ ಕಾಂತ ಕುಮಾರ್ ಆರ್. ಅವರು ಸಹ ವಯೋಮಿತಿ ಸಡಿಲಿಕೆ ಕುರಿತು ಮನವಿ ಸಲ್ಲಿಸಿದ್ದು, (Karnataka Police Jobs 2025) ಅಭ್ಯರ್ಥಿಗಳ ಹಿತಾಸಕ್ತಿಯನ್ನು ಪರಿಗಣಿಸಿ ಸರ್ಕಾರವು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.







