ಮೊಂತಾ ಚಂಡಮಾರುತದ (Montha Cyclone Effect) ಪರಿಣಾಮವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಮುನ್ಸೂಚನೆ (Heavy Rain Alert) ನೀಡಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ ನಾಳೆ ರಾಜ್ಯಾದ್ಯಂತ ಯೆಲ್ಲೋ ಅಲರ್ಟ್ (Yellow Alert in Karnataka) ಘೋಷಿಸಲಾಗಿದೆ. ಬೆಂಗಳೂರನ್ನು (Bangalore Weather) ಸೇರಿ ಅನೇಕ ಜಿಲ್ಲೆಗಳಲ್ಲಿ ಮಧ್ಯಾಹ್ನ ಅಥವಾ ಸಂಜೆ ವೇಳೆಗೆ ಗುಡುಗು-ಮಿಂಚಿನ ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಕರಾವಳಿ ಭಾಗಗಳಲ್ಲಿ — ಉಡುಪಿ (Udupi Rain Alert), ದಕ್ಷಿಣ ಕನ್ನಡ (Dakshina Kannada), ಮತ್ತು ಉತ್ತರ ಕನ್ನಡ (Uttara Kannada Rain) ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ. ಆದರೆ ಕಳೆದ ಕೆಲವು ದಿನಗಳಿಗಿಂತ ಮಳೆಯ ಪ್ರಮಾಣ ಸ್ವಲ್ಪ ಕಡಿಮೆ ಇರಲಿದೆ. ಮಂಗಳೂರು ನಗರದಲ್ಲಿ (Mangalore Weather) ಸಾಧಾರಣ ಮಳೆಯ ನಿರೀಕ್ಷೆ ಇದ್ದು, ಉಳಿದ ಭಾಗಗಳಲ್ಲಿ ಉತ್ತಮ ಮಳೆಯ ಸಾಧ್ಯತೆ ಇದೆ.
ಉತ್ತರ ಒಳನಾಡು ಭಾಗದ ಬೆಳಗಾವಿ (Belagavi Weather), ಧಾರವಾಡ (Dharwad), ಹಾವೇರಿ (Haveri), ಕಲಬುರಗಿ (Kalaburagi), ವಿಜಯಪುರ (Vijayapura) ಮತ್ತು ರಾಯಚೂರು (Raichur) ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗುವ ಅಂದಾಜು ಇದೆ. ಗಾಳಿಯ ವೇಗ ಗಂಟೆಗೆ 30-40 ಕಿ.ಮೀ. ಇರಬಹುದು ಎಂದು ಇಲಾಖೆಯು ತಿಳಿಸಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ (Ramanagara), ಕೋಲಾರ (Kolar), ಚಿಕ್ಕಬಳ್ಳಾಪುರ (Chikkaballapur), ಮಂಡ್ಯ (Mandya), ಮೈಸೂರು (Mysuru), ಚಾಮರಾಜನಗರ (Chamarajanagar), ತುಮಕೂರು (Tumakuru), ಹಾಸನ (Hassan), ಚಿತ್ರದುರ್ಗ (Chitradurga), ದಾವಣಗೆರೆ (Davangere), ಚಿಕ್ಕಮಗಳೂರು (Chikkamagaluru), ಶಿವಮೊಗ್ಗ (Shivamogga) ಮತ್ತು ಕೊಡಗು (Kodagu Rain Forecast) ಜಿಲ್ಲೆಗಳಲ್ಲಿ ಗುಡುಗು-ಮಿಂಚಿನ ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ.
ಆಂಧ್ರ ಪ್ರದೇಶದ 23 ಜಿಲ್ಲೆಗಳಲ್ಲಿ (Andhra Pradesh Red Alert) ರೆಡ್ ಅಲರ್ಟ್ ಘೋಷಣೆಯಾಗಿದ್ದು, ಅದರ ಪರಿಣಾಮ ಕರ್ನಾಟಕದ ಕರಾವಳಿ ಮತ್ತು ಒಳನಾಡು ಭಾಗಗಳ ಹವಾಮಾನದಲ್ಲೂ ಬದಲಾವಣೆ ಕಂಡುಬಂದಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ವರುಣನ ಅಬ್ಬರ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರು ನಗರದಲ್ಲಿ ನಾಳೆ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ರಾಜ್ಯಾದ್ಯಂತ ಮೋಡ ಕವಿದ ವಾತಾವರಣ (Cloudy Weather) ಮುಂದುವರಿಯುವ ಸಾಧ್ಯತೆ ಇದೆ.







