ಮಂಡ್ಯ ಜಿಲ್ಲಾ ಪಂಚಾಯತ್ ನೇಮಕಾತಿ 2025: ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ
ಮಂಡ್ಯ ಜಿಲ್ಲಾ ಪಂಚಾಯತ್ ಕಾರ್ಯಾಲಯವು (Mandya Zilla Panchayat Notification 2025) ಅಡಿಯಲ್ಲಿ ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಯ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಡಿಯಲ್ಲಿ ನಡೆಯುವ (National Gram Swaraj Abhiyan e-Panchayat) ಯೋಜನೆಯಡಿಯಲ್ಲಿ ಈ ಹುದ್ದೆ ಗೌರವಧನ ಆಧಾರಿತವಾಗಿದೆ.
ಹುದ್ದೆಯ ವಿವರಗಳು
ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ (Assistant District Planning Manager) ಹುದ್ದೆ ಒಂದು ಮಾತ್ರ ಲಭ್ಯವಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹30,000 ಸಂಭಾವನೆ ನೀಡಲಾಗುತ್ತದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಂಡ್ಯ ಜಿಲ್ಲಾ ಪಂಚಾಯತ್ ಅಧಿಕೃತ ವೆಬ್‌ಸೈಟ್ (mandya.nic.in) ಗೆ ಭೇಟಿ ನೀಡಬೇಕು.
ಅರ್ಹತೆ ಮತ್ತು ವಯೋಮಿತಿ
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ (B.E in CS/E&C/IS/AI), (MCA) ಅಥವಾ (BCA) ಪದವಿಯನ್ನು ಹೊಂದಿರಬೇಕು. ಜೊತೆಗೆ ಕನಿಷ್ಠ ಒಂದು ವರ್ಷದ ವೃತ್ತಿ ಅನುಭವ ಅಗತ್ಯವಿದೆ.
ವಯೋಮಿತಿ 30 ಸೆಪ್ಟೆಂಬರ್ 2025ರಂತೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 40 ವರ್ಷಗಳವರೆಗೆ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ
ಆಯ್ಕೆಯು ಮೂರು ಹಂತಗಳಲ್ಲಿ ನಡೆಯಲಿದೆ:
-
ಅರ್ಹ ಅಭ್ಯರ್ಥಿಗಳ ಶಾರ್ಟ್ ಲಿಸ್ಟಿಂಗ್
-
ಸಂದರ್ಶನ
-
ದಾಖಲೆಗಳ ಪರಿಶೀಲನೆ
ಅಭ್ಯರ್ಥಿಗಳು ಸಂದರ್ಶನ ವೇಳೆಗೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕು ಮತ್ತು (MS Office), (Panchayat Raj Web Applications) ಹಾಗೂ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪರಿಣಿತಿ ಹೊಂದಿರಬೇಕು.
ಅರ್ಜಿ ಸಲ್ಲಿಕೆ ವಿಧಾನ
-
ಅಧಿಕೃತ ಜಾಲತಾಣ mandya.nic.in ಗೆ ಭೇಟಿ ನೀಡಿ.
-
“ಸಹಾಯಕ ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆ” ಶೀರ್ಷಿಕೆಯನ್ನು ಆಯ್ಕೆಮಾಡಿ.
-
“Apply Online” ಲಿಂಕ್ ಮೇಲೆ ಕ್ಲಿಕ್ ಮಾಡಿ.
-
ಅಗತ್ಯ ವಿವರಗಳು ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.
-
ಅರ್ಜಿಯನ್ನು ಪರಿಶೀಲಿಸಿ ಸಲ್ಲಿಸಿ ಮತ್ತು ಪ್ರತಿ ಮುದ್ರಿಸಿಕೊಳ್ಳಿ.
ಮುಖ್ಯ ದಿನಾಂಕಗಳು
-
ಅರ್ಜಿ ಪ್ರಾರಂಭ: ಅಕ್ಟೋಬರ್ 27, 2025
-
ಅರ್ಜಿ ಕೊನೆ: ನವೆಂಬರ್ 10, 2025
ಈ ಅವಕಾಶವು ಮಂಡ್ಯ ಜಿಲ್ಲೆಯ ತಾಂತ್ರಿಕ ಶಿಕ್ಷಣ ಪಡೆದ ಯುವಕರಿಗೆ ಸರ್ಕಾರಿ ಯೋಜನೆಯಡಿ ತಾತ್ಕಾಲಿಕ ಗೌರವಧನ ಸೇವೆಯಲ್ಲಿ ಭಾಗವಹಿಸುವ ಚಾನ್ಸ್ ನೀಡುತ್ತದೆ.












