ರೈಲ್ವೆ NTPC ನೇಮಕಾತಿ 2025: ಕರ್ನಾಟಕದಲ್ಲಿ 8,850 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭ
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Railway Recruitment Board – RRB) ತಾಂತ್ರಿಕೇತರ ಜನಪ್ರಿಯ ವರ್ಗಗಳ (RRB NTPC Recruitment 2025) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಭಾರೀ ಪ್ರಮಾಣದ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಯಡಿ ಕರ್ನಾಟಕ ಸೇರಿದಂತೆ ದೇಶದಾದ್ಯಂತ 8,850 ಹುದ್ದೆಗಳು ಭರ್ತಿಯಾಗಲಿದ್ದು, ಪದವಿ ಹಂತದ 5,810 ಹುದ್ದೆಗಳು ಮತ್ತು ಪದವಿ ಪೂರ್ವ ಹಂತದ 3,050 ಹುದ್ದೆಗಳು ಲಭ್ಯವಿವೆ. ಹುದ್ದೆಗಳಲ್ಲಿ ಸ್ಟೇಷನ್ ಮಾಸ್ಟರ್, ಸರಕು ರೈಲು ನಿರ್ವಾಹಕ, ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್, ರೈಲು ಗುಮಾಸ್ತ ಸೇರಿದಂತೆ ಅನೇಕ ವಿಭಾಗಗಳಿವೆ.
ಅರ್ಜಿ ಸಲ್ಲಿಕೆ ದಿನಾಂಕಗಳು
ಪದವಿ ಹಂತದ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅಕ್ಟೋಬರ್ 21, 2025 ರಿಂದ ನವೆಂಬರ್ 20, 2025ರವರೆಗೆ ತೆರೆಯಲಿದೆ.
ಪದವಿ ಪೂರ್ವ ಹಂತದ ಹುದ್ದೆಗಳಿಗೆ ಅಕ್ಟೋಬರ್ 28, 2025 ರಿಂದ ನವೆಂಬರ್ 27, 2025ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ವಿದ್ಯಾರ್ಹತೆ
ಪದವಿ ಪೂರ್ವ ಹಂತಕ್ಕೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು, ಮತ್ತು ಪದವಿ ಹಂತಕ್ಕೆ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ
ಪದವಿ ಪೂರ್ವ ಹಂತಕ್ಕೆ 18 ರಿಂದ 33 ವರ್ಷ ಮತ್ತು ಪದವಿ ಹಂತಕ್ಕೆ 18 ರಿಂದ 36 ವರ್ಷದ ವಯಸ್ಸಿನವರು ಅರ್ಹರು. ಸರ್ಕಾರಿ ನಿಯಮಾನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳ ಆಯ್ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT-I, CBT-II), ಕೌಶಲ್ಯ ಪರೀಕ್ಷೆ ಅಥವಾ ಟೈಪಿಂಗ್ ಪರೀಕ್ಷೆ, ದಾಖಲೆ ಪರಿಶೀಲನೆ, ಹಾಗೂ ವೈದ್ಯಕೀಯ ಪರೀಕ್ಷೆ ಮೂಲಕ ನಡೆಯಲಿದೆ.
ವೇತನ ಮತ್ತು ಶುಲ್ಕ
ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ತಿಂಗಳಿಗೆ ₹16,000 ರಿಂದ ₹35,000 ವರೆಗೆ ವೇತನ ನೀಡಲಾಗುತ್ತದೆ.
ಅರ್ಜಿ ಶುಲ್ಕ: ಸಾಮಾನ್ಯ, ಓಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹500 ಮತ್ತು ಪಿ.ಜಾತಿ, ಪಿ.ಪಂಗಡ, ಅಲ್ಪಸಂಖ್ಯಾತ, ತೃತಿಯಲಿಂಗಿ ಮತ್ತು ಮಹಿಳೆಯರಿಗೆ ₹250.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು https://www.rrbapply.gov.in ಗೆ ಭೇಟಿ ನೀಡಿ, “RRB NTPC 2025 Recruitment” ಆಯ್ಕೆ ಮಾಡಿ, ವಿವರಗಳನ್ನು ನಮೂದಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಹಾಗೂ ಶುಲ್ಕ ಪಾವತಿ ಮಾಡಿ. ನಂತರ ಅಂತಿಮವಾಗಿ ಅರ್ಜಿ ಸಲ್ಲಿಸಿ ಅದರ ಪ್ರತಿಯನ್ನು ಭವಿಷ್ಯದ ಬಳಕೆಗಾಗಿ ಡೌನ್‌ಲೋಡ್ ಮಾಡಿಕೊಳ್ಳಿ.
(RRB NTPC Karnataka Recruitment 2025) ಕುರಿತು ಮುಖ್ಯ ಅಂಶಗಳು
ಈ ನೇಮಕಾತಿ ಕರ್ನಾಟಕದ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗದ ಉತ್ತಮ ಅವಕಾಶ. ರೈಲ್ವೆ ಇಲಾಖೆ ನೀಡುತ್ತಿರುವ ಈ ಹುದ್ದೆಗಳು ಸ್ಥಿರ ಹಾಗೂ ಗೌರವಯುತ ವೃತ್ತಿಜೀವನದ ಅವಕಾಶ ಒದಗಿಸುತ್ತವೆ. ತಾಂತ್ರಿಕೇತರ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿದ್ದು, ಅಭ್ಯರ್ಥಿಗಳಿಗೆ ವೃತ್ತಿಪರ ಕೌಶಲ್ಯ ಪ್ರದರ್ಶನಕ್ಕೆ ವೇದಿಕೆ ನೀಡಲಿದೆ.












