ಕೊಡಗು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (Integrated Child Development Project) ವ್ಯಾಪ್ತಿಯಡಿಯಲ್ಲಿ ಒಟ್ಟು 215 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಈ ನೇಮಕಾತಿಯಡಿ (Anganwadi Worker) ಹಾಗೂ (Anganwadi Helper) ಹುದ್ದೆಗಳಿಗಾಗಿ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ
ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಒಟ್ಟು 54 ಅಂಗನವಾಡಿ ಕಾರ್ಯಕರ್ತೆ ಮತ್ತು 161 ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇವೆ.
-
ಮಡಿಕೇರಿ ಯೋಜನೆ: 18 ಕಾರ್ಯಕರ್ತೆ, 37 ಸಹಾಯಕಿ (ಒಟ್ಟು 55 ಹುದ್ದೆಗಳು)
-
ಸೋಮವಾರಪೇಟೆ ಯೋಜನೆ: 15 ಕಾರ್ಯಕರ್ತೆ, 63 ಸಹಾಯಕಿ (ಒಟ್ಟು 78 ಹುದ್ದೆಗಳು)
-
ಪೊನ್ನಂಪೇಟೆ ಯೋಜನೆ: 21 ಕಾರ್ಯಕರ್ತೆ, 61 ಸಹಾಯಕಿ (ಒಟ್ಟು 82 ಹುದ್ದೆಗಳು)
ಶೈಕ್ಷಣಿಕ ಅರ್ಹತೆ
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ PUC ಉತ್ತೀರ್ಣರಾಗಿರಬೇಕು.
ಅಂಗನವಾಡಿ ಸಹಾಯಕಿ ಹುದ್ದೆಗೆ ಅಭ್ಯರ್ಥಿಗಳು SSLC ತೇರ್ಗಡೆ ಹೊಂದಿರಬೇಕು ಹಾಗೂ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು.
ವಯೋಮಿತಿ
ನವೆಂಬರ್ 13, 2025ರಂತೆ ಕನಿಷ್ಠ ವಯಸ್ಸು 19 ವರ್ಷ, ಗರಿಷ್ಠ 35 ವರ್ಷ. ವಿಕಲಚೇತನರಿಗೆ 10 ವರ್ಷದ ವಯೋಮಿತಿ ಸಡಿಲಿಕೆ ನೀಡಲಾಗಿದೆ.
ಆಯ್ಕೆ ವಿಧಾನ
ಮೆರಿಟ್ ಪಟ್ಟಿ ಮತ್ತು ದಾಖಲೆ ಪರಿಶೀಲನೆಯ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಯಾವುದೇ ಪರೀಕ್ಷೆ ಇರುವುದಿಲ್ಲ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://karnemakaone.kar.nic.in/abcd/ ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಪ್ರಕ್ರಿಯೆಯಲ್ಲಿ ಜಿಲ್ಲಾ ಆಯ್ಕೆ, ವೈಯಕ್ತಿಕ ಮಾಹಿತಿ ನಮೂದಿಕೆ, ಭಾವಚಿತ್ರ ಹಾಗೂ ಸಹಿ ಅಪ್‌ಲೋಡ್, ಅಗತ್ಯ ದಾಖಲೆಗಳ ಸಲ್ಲಿಕೆ ಹಂತಗಳು ಒಳಗೊಂಡಿವೆ.
ಅಂತಿಮ ದಿನಾಂಕ
ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಕೊನೆಯ ದಿನಾಂಕ ನವೆಂಬರ್ 13, 2025.
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾ ಕಚೇರಿಯನ್ನು ಸಂಪರ್ಕಿಸಬಹುದು.












