KARTET 2025 ಅರ್ಜಿ ಶುರು: ಅ.23ರಿಂದ ನೋಂದಣಿ, ಶಿಕ್ಷಕರಾಗಿ ಆಯ್ಕೆಯಾಗಲು ಈ ಅವಕಾಶ ತಪ್ಪಿಸ್ಕೊಳ್ಬೇಡಿ!

Published On: October 20, 2025
Follow Us

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (KARTET 2025): ಅರ್ಜಿ ಪ್ರಕ್ರಿಯೆ ಅಕ್ಟೋಬರ್ 23ರಿಂದ ಪ್ರಾರಂಭ

ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ 2025ನೇ ಸಾಲಿನ (KARTET 2025) ಅಧಿಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದೆ. ಈ ಪರೀಕ್ಷೆ 1 ರಿಂದ 8ನೇ ತರಗತಿಯ ಶಿಕ್ಷಕರ ನೇಮಕಾತಿಗೆ ಅಗತ್ಯವಾದ (teacher eligibility test) ಆಗಿದ್ದು, ರಾಷ್ಟ್ರಿಯ ಶಿಕ್ಷಕರ ಶಿಕ್ಷಣ ಪರಿಷತ್ (NCTE) ಮಾರ್ಗಸೂಚಿಗಳ ಪ್ರಕಾರ ಕನಿಷ್ಠ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಭಾಗವಹಿಸಬಹುದು.

ಅರ್ಜಿ ಸಲ್ಲಿಕೆ ದಿನಾಂಕಗಳು

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಕ್ಟೋಬರ್ 23, 2025ರಿಂದ ಪ್ರಾರಂಭವಾಗಿ ನವೆಂಬರ್ 9, 2025ರವರೆಗೆ ನಡೆಯಲಿದೆ. KARTET 2025 ಪರೀಕ್ಷೆ ಡಿಸೆಂಬರ್ 7 (ಭಾನುವಾರ)ರಂದು ನಡೆಯಲಿದೆ. ಅಭ್ಯರ್ಥಿಗಳು ತಮ್ಮ ನೋಂದಣಿಯನ್ನು ಅಧಿಕೃತ ವೆಬ್‌ಸೈಟ್ https://schooleducation.karnataka.gov.in ಮೂಲಕ ಪೂರ್ಣಗೊಳಿಸಬಹುದು.

ಶೈಕ್ಷಣಿಕ ಅರ್ಹತೆ

ಪತ್ರಿಕೆ 1 (Classes 1–5): ಪಿಯುಸಿ ಅಥವಾ ಪದವಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಜೊತೆಗೆ (D.El.Ed), (B.El.Ed), ಅಥವಾ (B.Ed) ಕೋರ್ಸ್ ಪೂರ್ಣಗೊಳಿಸಿರುವ ಅಥವಾ ಓದುತ್ತಿರುವವರು ಅರ್ಹರಾಗಿದ್ದಾರೆ.
ಪತ್ರಿಕೆ 2 (Classes 6–8): ಪಿಯುಸಿ ಅಥವಾ ಪದವಿ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದು, (B.Ed) ಅಥವಾ (D.El.Ed) ಕೋರ್ಸ್ ತೇರ್ಗಡೆಯಾಗಿರುವ ಅಥವಾ ಓದುತ್ತಿರುವವರು ಅರ್ಜಿ ಹಾಕಬಹುದು.

ಪರೀಕ್ಷೆಯ ವೇಳಾಪಟ್ಟಿ

  • ಪತ್ರಿಕೆ 1: ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 12 ಗಂಟೆ

  • ಪತ್ರಿಕೆ 2: ಮಧ್ಯಾಹ್ನ 2 ರಿಂದ ಸಂಜೆ 4:30 ಗಂಟೆ
    ವಿಕಲಚೇತನ ಅಭ್ಯರ್ಥಿಗಳಿಗೆ 50 ನಿಮಿಷಗಳ ಹೆಚ್ಚುವರಿ ಸಮಯ ನೀಡಲಾಗುತ್ತದೆ.

ಪರೀಕ್ಷಾ ಶುಲ್ಕ

  • ಸಾಮಾನ್ಯ ವರ್ಗ ಮತ್ತು 2A, 2B, 3A, 3B ಅಭ್ಯರ್ಥಿಗಳಿಗೆ: ಒಂದೇ ಪತ್ರಿಕೆಗೆ ₹700, ಎರಡೂ ಪತ್ರಿಕೆಗಳಿಗೆ ₹1000.

  • ಪ.ಜಾತಿ/ಪ.ವರ್ಗ/ಪ್ರವರ್ಗ-1 ಅಭ್ಯರ್ಥಿಗಳಿಗೆ: ಒಂದೇ ಪತ್ರಿಕೆಗೆ ₹350, ಎರಡೂ ಪತ್ರಿಕೆಗಳಿಗೆ ₹500.

  • ದಿವ್ಯಾಂಗ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ಸಂಪೂರ್ಣ ವಿನಾಯಿತಿ.

ಅರ್ಜಿ ಸಲ್ಲಿಕೆ ವಿಧಾನ

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

  2. Karnataka Teacher Eligibility Test (KARTET-2025)” ವಿಭಾಗದ “Online Registration Link” ಕ್ಲಿಕ್ ಮಾಡಿ.

  3. ಹೊಸ ಪುಟದಲ್ಲಿ ನೋಂದಣಿ ಅಥವಾ ಲಾಗಿನ್ ಮಾಡಿ, ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಹಾಗೂ ದಾಖಲೆಗಳನ್ನು ಅಪ್ಲೋಡ್ ಮಾಡಿ.

  4. ಅರ್ಜಿ ಶುಲ್ಕ ಪಾವತಿಸಿ ಸಲ್ಲಿಸಿ.

KARTET 2025 Notification PDF, Detailed Syllabus, ಹಾಗೂ Online Application Link ಎಲ್ಲವೂ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

Sanjay

I’m Sanjay, a passionate digital content creator with over 10 years of experience in Kannada news and media. As the founder of hosanews.com, I focus on delivering accurate, engaging, and insightful Kannada news for readers across Karnataka. 📞 Contact: +91 72049 88850 📧 Email: hogirihalagi@gmail.com

Join WhatsApp

Join Now

Join Telegram

Join Now

Related Posts

Anganwadi Recruitment 2025: ಹಾವೇರಿ ಜಿಲ್ಲೆಯಲ್ಲಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಪ್ರಾರಂಭ!

November 8, 2025

AFCAT 2025 Notification: ವಾಯುಪಡೆಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ರಾಷ್ಟ್ರಸೇವೆಗೆ ಸುವರ್ಣಾವಕಾಶ!

November 8, 2025

ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಪಡೆಯಲ್ಲಿ ಇನ್ಸ್ಪೆಕ್ಟರ್ (ಲೆಕ್ಕಾಧಿಕಾರಿ) ಹುದ್ದೆಗಳ ನೇಮಕಾತಿ – ಅರ್ಜಿ ಆಹ್ವಾನ ಪ್ರಕಟ!

November 5, 2025

ದಕ್ಷಿಣ ಮಧ್ಯ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ Group C ಮತ್ತು Group D ಹುದ್ದೆಗಳ ಭರ್ತಿ – ಅರ್ಜಿ ಆಹ್ವಾನ ಪ್ರಕಟ!

November 5, 2025

ರಾಜ್ಯದಲ್ಲಿ ಬರೋಬ್ಬರಿ 18000′ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ : CM ಸಿದ್ದರಾಮಯ್ಯ

November 4, 2025

BMRCL ನೇಮಕಾತಿ 2025: “ನಮ್ಮ ಮೆಟ್ರೋ”ಯಲ್ಲಿ ಸೂಪರ್ವೈಸರ್ ಹುದ್ದೆಗಳ ಭರ್ತಿ – ಅರ್ಜಿ ಪ್ರಕ್ರಿಯೆ ಪ್ರಾರಂಭ!

November 2, 2025

Leave a Comment