ಭಾರತದ ಪ್ರಮುಖ ಇಂಧನ ಸಂಸ್ಥೆ ONGC ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ 2025
ಭಾರತದ ಪ್ರಮುಖ ಇಂಧನ ಸಂಸ್ಥೆಯಾದ (Oil and Natural Gas Corporation – ONGC) ಸಂಸ್ಥೆ 2025ರ ಅಪ್ರೆಂಟಿಸ್ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಅವಕಾಶವು ಕರ್ನಾಟಕ ಸೇರಿದಂತೆ ದೇಶದ ವಿವಿಧ ವಲಯಗಳಲ್ಲಿ ಒಟ್ಟು 2623 ಅಪ್ರೆಂಟಿಸ್ ಹುದ್ದೆಗಳಿಗೆ (ONGC Apprentice Recruitment 2025) ನೀಡಲಾಗಿದೆ. ಪದವೀಧರರು, ಡಿಪ್ಲೊಮಾ ಹೊಂದಿರುವವರು ಮತ್ತು ಟ್ರೇಡ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಈ ತರಬೇತಿ ಕಾರ್ಯಕ್ರಮ ಲಭ್ಯ.
🔹 ಹುದ್ದೆಗಳ ವಲಯವಾರು ಹಂಚಿಕೆ:
-
ಉತ್ತರ ವಲಯ – 165 ಹುದ್ದೆಗಳು
-
ಮುಂಬೈ ವಲಯ – 569 ಹುದ್ದೆಗಳು
-
ಪಶ್ಚಿಮ ವಲಯ – 856 ಹುದ್ದೆಗಳು
-
ಪೂರ್ವ ವಲಯ – 458 ಹುದ್ದೆಗಳು
-
ದಕ್ಷಿಣ ವಲಯ – 322 ಹುದ್ದೆಗಳು
-
ಕೇಂದ್ರ ವಲಯ – 253 ಹುದ್ದೆಗಳು
🔹 ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ 10ನೇ ತರಗತಿ, (ITI/Engineering/Degree) ಪೂರ್ಣಗೊಳಿಸಿರಬೇಕು.
-
Graduate Apprentice: B.A., B.Com., B.Sc., BBA, B.E., B.Tech.
-
Diploma Apprentice: ಸಂಬಂಧಿತ ವಿಭಾಗದ ಮೂರು ವರ್ಷಗಳ ಎಂಜಿನಿಯರಿಂಗ್ ಡಿಪ್ಲೊಮಾ
-
Trade Apprentice: SSLC ಅಥವಾ 2ನೇ ಪಿಯುಸಿ
-
ITI Trade Apprentice (1 Year): 1 ವರ್ಷದ ITI ಕೋರ್ಸ್
-
ITI Trade Apprentice (2 Years): 2 ವರ್ಷದ ITI ಕೋರ್ಸ್
🔹 ವಯೋಮಿತಿ (06-11-2025ರಂತೆ):
-
ಕನಿಷ್ಠ ವಯಸ್ಸು – 18 ವರ್ಷ
-
ಗರಿಷ್ಠ ವಯಸ್ಸು – 24 ವರ್ಷ
ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾನುಸಾರ (Age Relaxation) ನೀಡಲಾಗುತ್ತದೆ.
🔹 ಆಯ್ಕೆ ವಿಧಾನ:
ಅರ್ಹ ಅಭ್ಯರ್ಥಿಗಳನ್ನು (Merit List) ಆಧಾರದ ಮೇಲೆ ಆಯ್ಕೆಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆ ನಡೆಯುತ್ತದೆ.
🔹 ಸ್ಟೈಪಂಡ್ (Stipend Details):
-
Graduate Apprentice – ₹12,300/-
-
Diploma Apprentice – ₹10,900/-
-
Trade Apprentice – ₹8,200/- ರಿಂದ ₹10,560/-
🔹 ಅರ್ಜಿ ಸಲ್ಲಿಕೆ:
-
ಅರ್ಜಿ ಪ್ರಾರಂಭ ದಿನಾಂಕ – ಅಕ್ಟೋಬರ್ 16, 2025
-
ಕೊನೆಯ ದಿನಾಂಕ – ನವೆಂಬರ್ 06, 2025
ಅರ್ಹ ಅಭ್ಯರ್ಥಿಗಳು (https://ongcindia.com) ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ (https://apprenticeshipindia.gov.in) ಹಾಗೂ ಪದವೀಧರ ಮತ್ತು ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳಿಗೆ (https://nats.education.gov.in) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ ಎಲ್ಲ ವರ್ಗಗಳಿಗೂ ಉಚಿತ (No Application Fee). ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಇಮೇಲ್ ಮೂಲಕ ಮಾಹಿತಿ ನೀಡಲಾಗುತ್ತದೆ.
🔹 ಕರ್ನಾಟಕದ ಅಭ್ಯರ್ಥಿಗಳಿಗೆ ಅವಕಾಶ:
ಕರ್ನಾಟಕದ ಯುವಕರು ಈ (ONGC Apprentice Karnataka 2025) ನೇಮಕಾತಿಯಲ್ಲಿ ಭಾಗವಹಿಸಬಹುದು. ರಾಜ್ಯದ ವಿವಿಧ ವಲಯಗಳಲ್ಲಿ ಹುದ್ದೆಗಳು ಲಭ್ಯವಿದ್ದು, ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಪಡೆದವರಿಗೆ ಇದು ಉತ್ತಮ ಅವಕಾಶವಾಗಿದೆ.












