ಮಹೀಂದ್ರಾ ಮತ್ತು ಮಹೀಂದ್ರಾ ಲಿಮಿಟೆಡ್ ಸಂಸ್ಥೆಯು 2025-26ನೇ ಶೈಕ್ಷಣಿಕ ಸಾಲಿಗೆ (Mahindra EmpowerHer Scholarship 2025-26) ಎಂಬ ವಿದ್ಯಾರ್ಥಿವೇತನ ಯೋಜನೆಗೆ ಅರ್ಜಿ ಆಹ್ವಾನಿಸಿದೆ. ಈ ಉಪಕ್ರಮವು (Girl Scholarship in Karnataka) ರಾಜ್ಯದ ಪ್ರತಿಭಾನ್ವಿತ ಹಾಗೂ ಆರ್ಥಿಕವಾಗಿ ಹಿಂದುಳಿದ ಹೆಣ್ಣುಮಕ್ಕಳ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ.
ಈ ಯೋಜನೆಯಡಿ ಪ್ರತಿ ಆಯ್ಕೆಯಾದ ವಿದ್ಯಾರ್ಥಿನಿಗೆ ರೂ.5,500ರ (Scholarship Amount) ಆರ್ಥಿಕ ನೆರವು ನೀಡಲಾಗುತ್ತದೆ. ಪ್ರಸ್ತುತ 9 ರಿಂದ 12ನೇ ತರಗತಿ ಹಾಗೂ ಸಾಮಾನ್ಯ ವಿಷಯಗಳಲ್ಲಿ (ಬಿಎ/ಬಿಕಾಂ/ಬಿಎಸ್ಸಿ) ಪದವಿಪೂರ್ವ ಅಥವಾ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಓದುತ್ತಿರುವ ಹುಡುಗಿಯರು ಈ ಯೋಜನೆಗೆ ಅರ್ಹರಾಗಿದ್ದಾರೆ. (Mahindra Scholarship Karnataka)
ಹಿಂದಿನ ಶೈಕ್ಷಣಿಕ ವರ್ಷ ಅಥವಾ ಸೆಮಿಸ್ಟರ್‌ನಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ಎಲ್ಲಾ ಮೂಲಗಳಿಂದ ರೂ.4 ಲಕ್ಷ ಮೀರಬಾರದು. (Eligibility for Mahindra Scholarship) ಕರ್ನಾಟಕ ಸೇರಿದಂತೆ ಭಾರತದಾದ್ಯಂತದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು, ಆದರೆ ಪಿಡಬ್ಲ್ಯೂಡಿ, ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿ ವರ್ಗದವರಿಗೆ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ (Online Application for Mahindra Scholarship) ಆನ್‌ಲೈನ್ ಆಗಿದೆ. ಆಸಕ್ತರು ನವೆಂಬರ್ 15, 2025ರೊಳಗೆ http://www.b4s.in/knah/MNM2 ಮೂಲಕ ಅರ್ಜಿ ಸಲ್ಲಿಸಬಹುದು. ಮೊದಲು Buddy4Study ಪೋರ್ಟಲ್‌ನಲ್ಲಿ ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆಯಿಂದ ನೋಂದಣಿ ಮಾಡಿ, ನಂತರ ‘Mahindra EmpowerHer Scholarship Program 2025-26’ ಫಾರ್ಮ್ ತೆರೆಯಿರಿ. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ, ದಾಖಲೆಗಳನ್ನು ಅಪ್‌ಲೋಡ್ ಮಾಡಿ ಹಾಗೂ ನಿಯಮಗಳಿಗೆ ಒಪ್ಪಿಕೊಂಡು ‘ಸಲ್ಲಿಸು’ ಬಟನ್ ಮೇಲೆ ಕ್ಲಿಕ್ ಮಾಡಿ.
ಈ ವಿದ್ಯಾರ್ಥಿವೇತನವು (Education Support for Girls) ಹಿಂದುಳಿದ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಪ್ರೇರಣೆಯಾಗಿದೆ. ಮಹೀಂದ್ರಾ ಸಂಸ್ಥೆಯ ಈ ಸಾಮಾಜಿಕ ಪ್ರಯತ್ನವು (Mahindra CSR Scholarship) ಮಹಿಳಾ ಸಬಲೀಕರಣದತ್ತ ದೊಡ್ಡ ಹೆಜ್ಜೆಯಾಗಿದೆ. ಕರ್ನಾಟಕದ ವಿದ್ಯಾರ್ಥಿನಿಯರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬೇಕು.












