Breaking: ರಾಜ್ಯಾದ್ಯಂತ 1200 ಚ.ಅಡಿ ಮನೆಗಳಿಗೆ OC ವಿನಾಯಿತಿ – ವಿಜಯ ಮನೆಮಾಲಕರು!

Published On: October 17, 2025
Follow Us

ರಾಜ್ಯ ಸರ್ಕಾರವು (Karnataka Government Decision) ಇಂದು ಮನೆ ನಿರ್ಮಾಣ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. 30×40 ಅಡಿ ವಿಸ್ತೀರ್ಣದ ಒಳಗಿನ ಮನೆಗಳಿಗೆ ನೀಡಲಾಗಿದ್ದ (OC exemption) ಓಸಿ ವಿನಾಯಿತಿಯನ್ನು ಈಗ ರಾಜ್ಯದ ಇತರೆ ನಗರ ಪ್ರದೇಶಗಳಿಗೂ ವಿಸ್ತರಿಸಲಾಗಿದೆ. ಈ ಕ್ರಮದ ಮೂಲಕ (Electricity connection) ವಿದ್ಯುತ್ ಮತ್ತು (Water connection) ನೀರಿನ ಸಂಪರ್ಕ ಪಡೆಯುವ ಪ್ರಕ್ರಿಯೆ ಇನ್ನಷ್ಟು ಸುಗಮವಾಗಲಿದೆ.

ಇತ್ತೀಚೆಗೆ ಬೆಂಗಳೂರಿನಲ್ಲಿ 1,200 ಚದರ ಅಡಿ ವಿಸ್ತೀರ್ಣದವರೆಗೆ ನಿರ್ಮಿಸಿದ ಮನೆಗಳಿಗೆ ಓಸಿ ಅಥವಾ ಸ್ವಾಧೀನಾನುಭವ ಪತ್ರವಿಲ್ಲದೆ ವಿನಾಯಿತಿ ನೀಡಲಾಗಿತ್ತು. ಇದೇ ಮಾದರಿಯನ್ನು ರಾಜ್ಯದ ಇತರೆ (City Corporations), (City Municipal Councils) ಮತ್ತು (Town Panchayats) ಗಳಿಗೂ ಅನ್ವಯಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬಂದಿದೆ. 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನೆಲಮಾಳಿಗೆ, ಎರಡು ಅಂತಸ್ತು, ಸ್ಟಿಲ್ಟ್ ಮತ್ತು ಮೂರು ಅಂತಸ್ತಿನ ವಸತಿ ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ಇಲ್ಲದೆ ನಿರ್ಮಾಣವಾದರೂ, ಅವರಿಗೆ (Occupancy Certificate) ಪಡೆಯುವ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗುತ್ತದೆ. ಇದರಿಂದ ಸಣ್ಣಮಟ್ಟದ ಮನೆ ಮಾಲೀಕರಿಗೆ ದೊಡ್ಡ ಸಹಾಯವಾಗಲಿದೆ.

ಸಂಪುಟದಲ್ಲಿ (Supreme Court Order) ಹಿನ್ನೆಲೆಯಲ್ಲಿಯೂ ಚರ್ಚೆ ನಡೆದಿದೆ. ಸರ್ಕಾರವು ಮುಂದಿನ ಹಂತದಲ್ಲಿ ನಕ್ಷೆ ಮಂಜೂರಾತಿ ಪಡೆಯದ ಕಟ್ಟಡಗಳಿಗೂ ಕ್ರಮಬದ್ಧ ವಿನಾಯಿತಿ ನೀಡುವ ಬಗ್ಗೆ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ. ಇದರೊಂದಿಗೆ ರಾಜ್ಯದ ವಿವಿಧ ನಗರ ಪ್ರದೇಶಗಳಲ್ಲಿ ಕಟ್ಟಡ ಮಾಲೀಕರಿಗೆ ಕಾನೂನುಬದ್ಧತೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ದೊಡ್ಡ ಹೆಜ್ಜೆಯಾಗಿದೆ.

ಈ ಕ್ರಮದ ಮೂಲಕ ಸಾವಿರಾರು ಮನೆಮಾಲೀಕರು ತಮ್ಮ ಆಸ್ತಿಗೆ ಕಾನೂನು ಮಾನ್ಯತೆ ಪಡೆಯಲು ಹಾಗೂ ವಿದ್ಯುತ್, ನೀರು, ಒಳಚರಂಡಿ ಮುಂತಾದ ಮೂಲಸೌಕರ್ಯಗಳನ್ನು ಸುಲಭವಾಗಿ ಪಡೆಯಲು ಅವಕಾಶ ದೊರೆಯಲಿದೆ. ಈ ನೀತಿ (Urban Development Policy Karnataka) ಅಡಿಯಲ್ಲಿ ಸರ್ಕಾರವು ನಗರ ಪ್ರದೇಶದ ನಾಗರಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಮುಂದಾಗಿದೆ.

Sanjay

I’m Sanjay, a passionate digital content creator with over 10 years of experience in Kannada news and media. As the founder of hosanews.com, I focus on delivering accurate, engaging, and insightful Kannada news for readers across Karnataka. 📞 Contact: +91 72049 88850 📧 Email: hogirihalagi@gmail.com

Join WhatsApp

Join Now

Join Telegram

Join Now

Leave a Comment